ನವದೆಹಲಿ: ಸರಕಾರಿ ಶಾಲಾ ಮೈದಾನವನ್ನು ಧಾರ್ಮಿಕ ಉತ್ಸವಗಳಿಗೆ ಬಳಸುವುದನ್ನು ಗುರುವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ, ಆದರೆ ಉತ್ತರ ಪ್ರದೇಶದ ತುಂಡ್ಲಾದಲ್ಲಿ ಶತಮಾನಗಳಿಂದ ಆಚರಿಸುತ್ತಿರುವ “ರಾಮಲೀಲಾ” ಕಾರ್ಯಕ್ರಮವನ್ನು ಆಯೋಜಿಸಲು ಅನುಮತಿ ನೀಡಿದೆ.

“ಶಾಲಾ ಮೈದಾನದಲ್ಲಿ ಧಾರ್ಮಿಕ ಉತ್ಸವಗಳನ್ನು ನಡೆಸುವುದನ್ನು ಅನುಮೋದಿಸದಿದ್ದರೂ, ಈ ರಾಮಲೀಲಾ ಕಳೆದ 100 ವರ್ಷಗಳಿಂದ ನಡೆಯುತ್ತಿದೆ ಮತ್ತು ಈ ವರ್ಷದ ಉತ್ಸವಗಳು ಸೆಪ್ಟೆಂಬರ್ 14 ರಂದು ಪ್ರಾರಂಭವಾಗಿದೆ” ಎಂದು ಪೀಠ ಹೇಳಿದೆ.
ವಿದ್ಯಾರ್ಥಿಗಳಿಗೆ ಯಾವುದೇ ಅನಾನುಕೂಲತೆ ಉಂಟಾಗದ ಹಾಗೆ ಸರಕಾರಿ ಶಾಲಾ ಮೈದಾನದಲ್ಲಿ ಆಚರಣೆಗಳನ್ನು ನಡೆಸುವುದನ್ನು ನಿಷೇಧಿಸುವ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಉಜ್ಜಲ್ ಭುಯಾನ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಸುಪ್ರೀಂ ಪೀಠ ತಡೆಹಿಡಿದಿದೆ.




