ಕೊಪ್ಪಳದಲ್ಲಿ ಮರವೇರಿ ಕೂತ ಸ್ವಾಮೀಜಿ..! 101 ದಿನ ಅಲ್ಲೇ ವಾಸ..!!

Share with

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುಷ್ಟೂರು ಬಳಿಯಿರುವ ಬರಗಾಲ ಸಿದ್ದಪ್ಪ ಮಠದ ಆವರಣದಲ್ಲಿ ಅವಧೂತರೊಬ್ಬರು ಲೋಕ ಕಲ್ಯಾಣಕ್ಕಾಗಿ ಮರವೇರಿದ್ದಾರೆ.

ಆ ಸ್ವಾಮೀಜಿ ಹೆಸರು ಸಚ್ಚಿದಾನಂದ ಶ್ರೀ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬಾದ್ಯಪುರದ ಅವಧೂತ ಸ್ವಾಮೀಜಿ. ಇದೀಗ ಕೊಪ್ಪಳಕ್ಕೆ ಬಂದು ಮರದ ಮೇಲೆ ಗೂಡು ಕಟ್ಟಿ ದಿನವೀಡಿ ನಿಯಮಗಳನ್ನು ಅನುಷ್ಠಾನ ಮಾಡ್ತಿದ್ದಾರೆ. ದಿನಕ್ಕೆ ಒಂದು ಬಾರಿ ಮಾತ್ರ ಹಾಲು ಕುಡಿಯುತ್ತಿದ್ದಾರೆ. ಅದನ್ನು ಬಿಟ್ಟರೆ ಬೇರೆ ಏನನ್ನೂ ಸೇವನೆ ಮಾಡ್ತಿಲ್ಲ ಎನ್ನಲಾಗಿದೆ.

ಮಾಹಿತಿಗಳ ಪ್ರಕಾರ, 101 ದಿನ ಮರದಲ್ಲಿಯೇ ಕುಳಿತು ಧ್ಯಾನ ಮಾಡಲಿದ್ದಾರಂತೆ. 2012ರಲ್ಲೂ ಆಲದಮರದಲ್ಲಿ ಅನುಷ್ಠಾನಕ್ಕೆ ಕುಳಿತಿದ್ದರು. ಅಂದು ಅವರ ನಡೆ ದೇಶದಾದ್ಯಂತ ಸದ್ದು ಮಾಡಿತ್ತು. ಇದೀಗ ಮತ್ತೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುಷ್ಟೂರು ಬಳಿಯಿರುವ ಬರಗಾಲ ಸಿದ್ದಪ್ಪ ಮಠದ ಆವರಣದಲ್ಲಿ ಧ್ಯಾನಕ್ಕೆ ಕೂತಿದ್ದಾರೆ.

ಅಂದು ಆಲದ ಮರವೇರಿ ಕೂತಿದ್ದ ಸ್ವಾಮೀಜಿ, ಇಂದು ಮಾವಿನ ಮರದ ಮೇಲೆ ಗೂಡು ಕಟ್ಟಿದ್ದಾರೆ. ಮರದ ಮೇಲೆ ಕುಳಿತು ಮೌನವೃತ ಕೈಗೊಂಡಿದ್ದಾರೆ. ಸ್ವಾಮೀಜಿಯನ್ನು ನೋಡಿದ ಭಕ್ತರು ಅಚ್ಚರಿಗೆ ಒಳಗಾಗಿದ್ದಾರೆ.


Share with

Leave a Reply

Your email address will not be published. Required fields are marked *