ಪುತ್ತೂರು: ಬನ್ನೂರು ಕೃಷ್ಣನಗರ ಸಮೀಪದಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆ. 05 ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತೆ ಬೀರಿಗ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅರುಣ ಡಿ. ಶಿಕ್ಷಕರಿಗೆ ಶೈಕ್ಷಣಿಕ ಮೌಲ್ಯಗಳನ್ನು ತಿಳಿಸಿಕೊಟ್ಟು ಮುಂದೆ ಈ ಒಂದು ಪುಟ್ಟ ಸಂಸ್ಥೆಯು ಒಂದು ಉತ್ತಮ ವಿದ್ಯಾಸಂಸ್ಥೆಯಾಗಲಿ ಎಂದು ಶುಭ ಹಾರೈಸಿದರು. ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ರುಕ್ಮಿಣಿ ಡಿ. ಇವರು ಸನ್ಮಾನಿಸಿದರು.
ಸನ್ಮಾನಿಸಿದ ರುಕ್ಮಿಣಿ ಡಿ ಅವರಿಗೆ ಬನ್ನೂರು ಗ್ರಾಮದ ಪುರಸಭೆ ಸದಸ್ಯೆ ಗೌರಿ ಬನ್ನೂರು ಸ್ಮರಣಿಕೆ ನೀಡಿ ಗೌರವಿಸಿದರು. ಸಂಸ್ಥೆಯ ಸಂಚಾಲಕ ಎ.ವಿ. ನಾರಾಯಣ ಇವರು ಶಾಲೆಯ ಉನ್ನತಿ ಕುರಿತು ಮಾತುಗಳನ್ನಾಡಿದರು. ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಇವರು ಸಭಾಧ್ಯಕ್ಷತೆಯನ್ನು ವಹಿಸಿಕೊಂಡರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಖಜಾಂಚಿ ವನಿತಾ ಎ.ವಿ. ಅತಿಥಿಯವರನ್ನು ಪರಿಚಯಿಸಿದರು. ಸಂಸ್ಥೆಯ ನಿರ್ದೇಶಕರಾದ ಡಾ.ಅನುಪಮಾ, ರಾಮಣ್ಣ ಗೌಡ ಹಲಂಗ, ಗಂಗಾಧರ ಗೌಡ ಎ.ವಿ., ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಗಣೇಶ್ ಎನ್ , ಸದಸ್ಯರಾದ ಮಾಲಿನಿ, ಹರ್ಷಿತ , ಪೋಷಕರು, ಉಪಸ್ಥಿತಿಯಲ್ಲಿದ್ದರು. ಸಂಸ್ಥೆಯ ಸಹಾಯಕರಾದ ನಾರಾಯಣ ಕುಲಾಲ್ , ಭುವನೇಶ್ವರಿ, ಪುಟಾಣಿ ಮಕ್ಕಳು ಸಹಕರಿಸಿದರು. ಶಾಲೆಯ ಪುಟಾಣಿಯರಾದ ನಿಷ್ಕಾ, ತನಿಷ್ಕ ಮತ್ತು ಕೃತಿನ್ ಇವರು ಪ್ರಾರ್ಥಿಸಿದರು ಸಂಸ್ಥೆಯ ಶಿಕ್ಷಕಿ ಯಶುಭ ರೈ ಇವರು ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಪ್ರಾಂಶುಪಾಲೆ ಉಷಾ ಕಿರಣ ಕೆ.ಯಸ್ ಇವರು ಅತಿಥಿಯರನ್ನು ಸ್ವಾಗತಿಸಿದರು, ಉಪಾಧ್ಯಕ್ಷರಾದ ಉಮೇಶ್ ಮಳುವೇಲು ವಂದಿಸಿದರು, ಶಿಕ್ಷಕಿ ವನಿತಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.