ಟಾಕ್ಸಿಕ್’ ಕುರಿತು ಸ್ಪಷ್ಟನೆ ಕೊಟ್ಟ ನಟಿ!

Share with

ರಾಕಿಂಗ್ ಸ್ಟಾರ್ ಯಶ್‌ರ ಟಾಕ್ಸಿಕ್ ನಲ್ಲಿ ನಟಿಸುತ್ತಿರುವ ಬಗ್ಗೆ ನಟಿ ತಾರಾ ಸುತಾರಿಯಾ ಸ್ಪಷ್ಟನೆ ಕೊಟ್ಟಿದ್ದಾರೆ.

ಸಿನಿಮಾದಲ್ಲಿ ಅವರು 2ನೇ ನಾಯಕಿ ಎಂದು ವರದಿಯಾಗಿತ್ತು. ಈ ಬಗ್ಗೆ ಮಾತನಾಡಿರುವ ಅವರು ‘ಇತ್ತೀಚೆಗೆ ಪ್ರಾಜೆಕ್ಟ್ ಒಂದರ ಬಗ್ಗೆ ಬರೆಯಲಾದ ಆರ್ಟಿಕಲ್ ಸುಳ್ಳು. ನಾನು ಆ ವಿಚಾರವನ್ನು ಹಂಚಿಕೊಂಡಿಲ್ಲ. ಇಲ್ಲಿ ಯಾರೂ ಎರಡನೆಯವರಲ್ಲ’ ಎಂದು ಪೋಸ್ಟ್ ಮಾಡುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಚಿತ್ರದಲ್ಲಿ ನಯನತಾರಾ, ಶ್ರುತಿ ಹಾಸನ್ ನಟಿಸುವುದರ ಬಗ್ಗೆಯೂ ಅಧಿಕೃತವಾಗಿಲ್ಲ.


Share with