ಪುತ್ತೂರು: ಗೆಳೆಯರ ಜೊತೆಗೂಡಿ ಹೊಳೆಗೆ ಈಜಲು ತೆರಳಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ. ಮಾಡಾವು ಕಟ್ಟತ್ತಾರು ನಿವಾಸಿ ಹಂಝ ಎಂಬವರ ಪುತ್ರ ಎಂದು ಗುರುತಿಸಲಾಗಿದೆ.
ತಸ್ಲಿಮ್ ಅ.15ರಂದು ಸಂಜೆ ಗೆಳೆಯರ ಜೊತೆಗೂಡಿ ಅರಿಕ್ಕಿಲ ಸಮೀಪದ ಎರಕ್ಕಲ ಎಂಬಲ್ಲಿ ಹೊಳೆಗೆ ಈಜಲು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿತ್ತು. ಯುವಕ ನಾಪತ್ತೆಯಾಗುತ್ತಿದ್ದಂತೆ ಸ್ನೇಹಿತರು ಮನೆಯವರಿಗೆ ಹಾಗೂ ಸ್ಥಳೀಯರಿಗೆ ವಿಷಯವನ್ನು ತಿಳಿಸಿದ್ದರು.
ತಕ್ಷಣ ಸ್ಥಳೀಯರು ಹೊಳೆಯಲ್ಲಿ ಹುಡುಕಾಟ ನಡೆಸಿದರಾದರೂ ಮೃತದೇಹ ಪತ್ತೆಯಾಗಿರಲಿಲ್ಲ. ಬಳಿಕ ಮುಳುಗು ತಜ್ಞರು ಕಾರ್ಯಾಚರಣೆಯನ್ನು ಮುಂದುವರಿಸಿದ್ದರು. ಅದರೂ ಮೃತದೇಹ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ಹುಡುಕಾಟ ಮುಂದುವರಿಸಿದಾಗ ಈಜಲು ತೆರಳಿದ್ದ ಸ್ಥಳದ ಆಸುಪಾಸಿನಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.