ಸಿಡ್ನಿ: ಖಿನ್ನತೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರ ಮೆದುಳಿನಲ್ಲಿ ಜೀವಂತ ಹುಳು ಹೊರತೆಗೆದಿರುವ ಘಟನೆ ಆಸ್ಟ್ರೇಲಿಯಾದಲ್ಲಿ ವರದಿಯಾಗಿದೆ.
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್’ನ 64 ವರ್ಷದ ಮಹಿಳೆಯ ಮೆದುಳಿನಲ್ಲಿ 8 ಸೆಂಮೀ ಉದ್ದದ ಜಂತು ಹುಳುವೊಂದು ಪತ್ತೆಯಾಗಿದ್ದು, ಸಜೀವವಾಗಿರುವ ಈ ಹುಳ ಮೆದುಳಿನಲ್ಲಿ ಪತ್ತೆಯಾಗಿರುವುದು ಜಗತ್ತಿನಲ್ಲಿಯೇ ಮೊದಲ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ.
ಈ ಮಹಿಳೆಯಲ್ಲಿ ಖಿನ್ನತೆ ಮತ್ತು ಸ್ಮರಣ ಶಕ್ತಿ ಸಮಸ್ಯೆ ಕಂಡುಬಂದಿದ್ದರಿಂದ ಪರೀಕ್ಷೆ ನಡೆಸುವಾಗ ಹುಳು ಪತ್ತೆಯಾಗಿದೆ. ಬಳಿಕ ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಿ ವೈದ್ಯರು ಜೀವಂತ ಹುಳುವನ್ನು ಹೊರತೆಗೆದಿದ್ದಾರೆ