ಕಟ್ಟಡದ ಮೇಲೆ ಪೈಂಟಿಂಗ್‌ ಮಾಡುವಾಗಲೇ ಬಂತು ಫಿಟ್ಸ್; ಪ್ರಾಣದ ಹಂಗು ತೊರೆದು ಸ್ನೇಹಿತನ ಜೀವ ಉಳಿಸಿದ ಹೃದಯವಂತ

Share with

ಖುಷಿ, ಸಂತೋಷದ ಸಮಯದಲ್ಲಿ ಮಾತ್ರವಲ್ಲ, ನಮ್ಮ ಕಷ್ಟದ ಸಮಯದಲ್ಲಿ ನಮಗೆ ಬೆಂಬಲವಾಗಿ, ನಮಗೆ ಜೊತೆಯಾಗಿ ನಿಲ್ಲುವವರೇ ನಿಜವಾದ ಸ್ನೇಹಿತರು ಎಂದು ಹೇಳುತ್ತಾರೆ. ಇಂತಹ ನಿಷ್ಕಲ್ಮಶ ಸ್ನೇಹವನ್ನು ಹೊಂದಿದಂತಹ ಅದೆಷ್ಟೋ ಸ್ನೇಹಿತರ ಕಥೆಗಳನ್ನು ನೀವು ನೋಡಿರುತ್ತೀರಿ ಅಲ್ವಾ. ಇಲ್ಲೊಂದು ಅಂತಹದ್ದೇ ದೃಶ್ಯವೊಂದು ವೈರಲ್‌ ಆಗುತ್ತಿದ್ದು, ಫಿಟ್ಸ್‌ಗೆ ತುತ್ತಾಗಿ ಮೂರ್ಛೆ ತಪ್ಪಿ ಕಟ್ಟಡದ ಮೇಲಿಂದ ಬೀಳುತ್ತಿದ್ದ ಸ್ನೇಹಿತನ ಪ್ರಾಣವನ್ನು ಉಳಿಸುವ ಮೂಲಕ ಗೆಳೆಯನೊಬ್ಬ ಮಾನವೀಯತೆ ಮೆರೆದಿದ್ದಾನೆ. ಎತ್ತರದ ಕಟ್ಟಡವೊಂದಕ್ಕೆ ಪೈಂಟಿಂಗ್‌ ಮಾಡುವ ವೇಳೆ ಪೈಂಟರ್‌ಗೆ ಫಿಟ್ಸ್‌ ಕಾಣಿಸಿಕೊಂಡಿದ್ದು, ತಕ್ಷಣ ಸಮಯ ಪ್ರಜ್ಞೆಯಿಂದ ಆ ವ್ಯಕ್ತಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸ್ನೇಹಿತನ ಜೀವವನ್ನು ಕಾಪಾಡಿದ್ದಾನೆ. ಈತನ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ತಲೆ ಬಾಗಿದ್ದಾರೆ.

ಕಟ್ಟಡವೊಂದಕ್ಕೆ ಪೈಂಟಿಂಗ್‌ ಮಾಡುವ ವೇಳೆ ಫಿಟ್ಸ್‌ಗೆ ತುತ್ತಾಗಿದ್ದು, ಪರಿಣಾಮ ಆತನ ಕಾಲು ಏಣಿಯ ಹಗ್ಗಕ್ಕೆ ಸಿಲುಕಿ ತಲೆ ಕೆಳಗಾಗಿ ನೇತಾಡಿದ್ದಾನೆ. ತಕ್ಷಣ ಆತನ ಸ್ನೇಹಿತ ಅಲ್ಲಿಗೆ ಬಂದು ಆತನನ್ನು ಜೋಪಾನವಾಗಿ ಕೆಳಗಿಳಿಸುವ ಮೂಲಕ ಗೆಳೆಯನ ಪ್ರಾಣವನ್ನು ಕಾಪಾಡಿದ್ದಾನೆ.


Share with

Leave a Reply

Your email address will not be published. Required fields are marked *