ಮಧ್ಯವರ್ಜನ ಶಿಬಿರದ 5ನೇ ದಿನದ ದೈನಂದಿನ ಕರ್ತವ್ಯ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದ ಯೋಜನೆಯ ಕಲ್ಲಡ್ಕ ವಲಯ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡ

Share with

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅಕ್ಷಯ ಸಮುದಾಯ ಭವನ ವಿಟ್ಲ ದಲ್ಲಿ ನಡೆಯುತ್ತಿರುವ 1722 ನೇ ಮಧ್ಯವರ್ಜನ ಶಿಬಿರದ 5ನೇ ದಿನದ ದೈನಂದಿನ ಕರ್ತವ್ಯ ನಿರ್ವಹಣಾ ಜವಾಬ್ದಾರಿಯನ್ನು ಯೋಜನೆಯ ಕಲ್ಲಡ್ಕ ವಲಯ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡ, ವಿಟ್ಲ ಪಡ್ನೂರು ಬಿ ಒಕ್ಕೂಟದ ಸದಸ್ಯರು, ಸೇರಿಕೊಂಡುಯಶಸ್ವಿಯಾಗಿ ನಡೆಸಿದರು.



ಶ್ರೀ ಸತ್ಯ ಸಾಯಿ ಲೋಕ ಸೇವಾ ವಿದ್ಯೆ ಸಂಸ್ಥೆಅಳಿಕೆಯ ಯೋಗ ಶಿಕ್ಷಕ ಆನಂದ ಶೆಟ್ಟಿ ಶಿಬಿರಾರ್ಥಿಗಳಿಗೆ ಯೋಗ ಮಾಡಿಸಿದರು, ನಂತರ ಶಿಬಿರಾರ್ಥಿಗಳಿಂದ ವಠಾರ ಸ್ವಚ್ಛತಾ ಶ್ರಮದಾನ ಜರಗಿತು. ಶಿಬಿರ ಅಧಿಕಾರಿ ದೇವಿಪ್ರಸಾದ್ ದಿನದ ಮಾಹಿತಿ ನೀಡಿದರು. ಜನ ಜೀವನ ಸಮಿತಿಯ ಸದಸ್ಯರಿಂದ ಅನಿಸಿಕೆಗಳನ್ನು ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎ ಎಸ್ ಆದರ್ಶ ಚೊಕ್ಕಾಡಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ಎಂ ಎಸ್ ಡಬ್ಲ್ಯೂ ಪ್ರೊಫೆಸರ್ ಕುಮಾರೇಶ್ ಭಟ್ ಆಗಮಿಸಿ ಮಾಹಿತಿ ನೀಡಿದರು.



ಶಿಬಿರಾರ್ಥಿಗಳ ಮನೆಯವರಿಗೆ ವಿಟ್ಲ ಸಮುದಾಯ ಅರೋಗ್ಯ ಕೇಂದ್ರದ ಡಾಕ್ಟರ್ ವೇದವತಿ ಬಲ್ಲಾಳ್,ಹಾಗೂ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಸುಮ, ಹಾಗೂ ಯೋಜನೆಯ ಅರೋಗ್ಯ ಸಹಾಯಕಿ ನೇತ್ರಾವತಿ ಕೌಟುಂಬಿಕ ಸಲಹೆ ನೀಡಿದರು.


ಮಧ್ಯಾಹ್ನ ನಂತರ ನಡೆದ ಗಣ್ಯರಿಂದ ಮಾಹಿತಿ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಶ್ರೀ ಕಿರಣ್ ಹೆಗ್ಡೆ, ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಮಹೇಶ್ ಕೆ ಸವಣೂರು, ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ, ಕಲ್ಲಡ್ಕ ವಲಯ ಜನಜಾಗ್ರತಿ ವೇದಿಕೆ ಅಧ್ಯಕ್ಷರಾದ ಭಟ್ಯಪ್ಪ ಶೆಟ್ಟಿ, ಮೊದಲಾದವರು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ವಿಟ್ಲ ತಾಲೂಕು ಯೋಜನೆ ಅಧಿಕಾರಿ ಚೆನ್ನಪ್ಪ ಗೌಡ, ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋನಪ್ಪ ಗೌಡ, ಜನಜಾಗೃತಿ ವೇದಿಕೆಯ ಕೇಪು ವಲಯ ಅಧ್ಯಕ್ಷ ರಾಧಾಕೃಷ್ಣ ಚಲ್ಲಡ್ಕ, ಮಾಣಿ ವಲಯ ರಾಜಾರಾಮ್ ಶೆಟ್ಟಿ, ಯೋಜನೆಯ ಕೇಪು ವಲಯ ಅಧ್ಯಕ್ಷ ಗಣೇಶ್ ಕರೋಪಾಡಿ, ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ, ವಿಟ್ಲ ವಲಯ ಅಧ್ಯಕ್ಷ ಪ್ರಮೀಳಾ, ವಿಟ್ಲ ಪಟ್ನೂರು ಬಿ ಒಕ್ಕೂಟದ ಅಧ್ಯಕ್ಷ ಪ್ರೇಮಲತಾ, ಬೋಳಂತೂರು ಒಕ್ಕೂಟದ ಅಧ್ಯಕ್ಷ ಸೀತಾ, ಗೋಳ್ತ ಮಜಲು ಒಕ್ಕೂಟ ಅಧ್ಯಕ್ಷ ಸೀತಾರಾಮ್, ಮಾಮೇಶ್ವರ ಒಕ್ಕೂಟ ಅಧ್ಯಕ್ಷ ಹರೀಶ್, ಕೆಲಿಂಜ ಒಕ್ಕೂಟ ಅಧ್ಯಕ್ಷ ದಯಾನಂದ ಗೌಡ, ಕಡಬ ಮಧ್ಯವರ್ಜನ ಶಿಬಿರದ ಸಮಿತಿಯ ಪದಾಧಿಕಾರಿಗಳಾದ ವೇಣುಗೋಪಾಲ, ಲಕ್ಷ್ಮಣಗೌಡ, ಪರಮೇಶ್ವರ, ಜಯಂತ, ಶಿಬಿರ ಅಧಿಕಾರಿ ದೇವಿ ಪ್ರಸಾದ್, ಕಲ್ಲಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಅಧ್ಯಕ್ಷ ಮಾಧವ ಸಾಲಿಯನ್, ಮೊದಲಾದವರು. ಉಪಸ್ಥಿತರಿದ್ದರು.


ಮಾಮೇಶ್ವರ ಒಕ್ಕೂಟದ ಸೇವ ಪ್ರತಿನಿಧಿ ಯಶೋಧ ಸ್ವಾಗತಿಸಿ, ಕೆಲಿಂಜ ಒಕ್ಕೂಟದ ಸೇವಾ ಪ್ರತಿನಿಧಿ ರೇಣುಕ ವಂದಿಸಿದರು.ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಗಣ್ಯರ ಮಾಹಿತಿ ನಂತರ ಕಲ್ಲಡ್ಕ ವಲಯದ ವಿವಿಧ ಒಕ್ಕೂಟಗಳ ಜ್ಞಾನವಿಕಾಸ ಸದಸ್ಯರುಗಳಿಂದ, ಒಕ್ಕೂಟದ ಸದಸ್ಯರುಗಳಿಂದ, ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಶಿಬಿರಾರ್ಥಿಗಳಿಗೆ ಶಾರೀರಿಕ ಗುಂಪು ಚಟುವಟಿಕೆ ಹಾಗೂ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಮಾಮೇಶ್ವರ ಇವರಿಂದ ಭಜನಾ ಕಾರ್ಯಕ್ರಮ ಜರಗಿತು.



ದಿನದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬಂಟ್ವಾಳದ ನಿಕಟ ಪೂರ್ವ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ, ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ, ಜನಜಾಗ್ರತಿ ವೇದಿಕೆ ಅಳಿಕೆ ವಲಯ ಅಧ್ಯಕ್ಷ ಬಾಲಕೃಷ್ಣ ಕಾರಂತ್,ವಿಟ್ಲ ವಲಯ ಮೇಲ್ವಿಚಾರಕಿ ಸರಿತಾ, ಕೇಪು ವಲಯ ಮೇಲ್ವಿಚಾರಕ ಜಗದೀಶ್,ಯೋಜನೆಯ ಕೃಷಿ ಅಧಿಕಾರಿ ಚಿದಾನಂದ, ವಿಟ್ಲ ಪಡ್ನೂರು ಒಕ್ಕೂಟದ ಸದಸ್ಯರುಗಳು,ಯೋಜನೆಯ ಕಲ್ಲಡ್ಕ ವಲಯಕ್ಕೆ ಸಂಬಂಧಪಟ್ಟ ಎಲ್ಲಾ ಒಕ್ಕೂಟಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು,ಸೇವಾ ಪ್ರತಿನಿಧಿಗಳು, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರುಗಳು, ಸ್ವ ಸಹಾಯ ಸಂಘದ ಸದಸ್ಯರಗಳು, ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.


Share with

Leave a Reply

Your email address will not be published. Required fields are marked *