ಮನೆಯಲ್ಲಿ ಜಾರಿ ಬಿದ್ದು ಬೆನ್ನುಮೂಳೆ ಪೆಟ್ಟು ಮಾಡಿಕೊಂಡಿರುವ ವೃಕ್ಷಮಾತೆ ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಿಮ್ಮಕ್ಕ ಅಡ್ಮಿಟ್ ಆಗಿರುವ ಆಸ್ಪತ್ರೆಯಲ್ಲಿ ಅವರ ಆರೋಗ್ಯವನ್ನು ಸಚಿವ ಈಶ್ವರ್ ಖಂಡ್ರೆ ವಿಚಾರಿಸಿದರು. ಈ ವೇಳೆ ತಿಮ್ಮಕ್ಕಗೆ ಧೈರ್ಯ ತುಂಬಿದ ಖಂಡ್ರೆ, ‘ನಿಮಗೆ ಕರುನಾಡಿನ ಜನರ, ಪರಿಸರ ಪ್ರೇಮಿಗಳ ಶುಭಹಾರೈಕೆ ಇದೆ. ನೀವು ಬೇಗ ಗುಣಮುಖರಾಗುತ್ತೀರಿ’ ಎಂದು ಹೇಳಿದರು.