ಕೆಸರು ಗದ್ದೆಯಾದ ಆಲೂರು ಬಿಕ್ಕೋಡು ಮುಖ್ಯ ರಸ್ತೆ.

Share with

ಆಲೂರು: ಸರ್ಕಾರದ ನಿರ್ಲಕ್ಷಕ್ಕೆ ರಸ್ತೆಯ ಅವ್ಯವಸ್ಥೆ ಕಂಡು  ಎತ್ತಿನಹೊಳೆ ಅಧಿಕಾರಿಗಳಿಗೆ ಗ್ರಾಮಸ್ಥರು ಛೀಮಾರಿ ಹಾಕಿರುವ ಘಟನೆ ಕಂಡು ಬಂದಿದೆ. ಮತ್ತು ರಸ್ತೆಯಲ್ಲಿ ಭತ್ತದ ನಾಟಿ ಮಾಡುವ ಮೂಲಕ ಪ್ರತಿಭಟನೆ ಮಾಡಿದರು.

ನಂತರ ಮಾತನಾಡಿದ ಗ್ರಾಮಸ್ಥ ಕುಡಿಯುವ ನೀರಿನ ಎತ್ತಿನಹೊಳೆ ಮಹಾತ್ತರ ಯೋಜನೆ ಕೋಟಿ ಕೋಟಿ ಹಣ ನೀರಲ್ಲಿ ಹೋಮವಾಗಿದೆ ಹಾಗೂ ಕೆಸರು ಗದ್ದೆಯಾದ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ, ಅದಲ್ಲದೆ ಎತ್ತಿನಹೊಳೆ ಯೋಜನೆ ಕಾಮಗಾರಿ ಹೇಳೋರಿಲ್ಲ ಕೇಳೋರಿಲ್ಲ ,ಅಧಿಕಾರಿಗಳು ಆಡಿದ್ದೇ ಆಟವಾಗಿದೆ ಎಂದು ಮಾತನಾಡಿದಲ್ಲದೆ


ರಸ್ತೆಯಲ್ಲಿ ಸಂಚಾರಿಸಲಾಗದೆ ತಿರುಗಾಡುವ ಪರಿಸ್ಥಿತಿ ಎದುರಾಗಿದೆ .ನಾವೆಲ್ಲ ಭಯಭೀತರಾಗಿ ಓಡಾಡುವ ಪರಿಸ್ಥಿತಿ ಎದುರಾಗಿದೆ ಅದಲ್ಲದೆ ಈ ಕಾಮಗಾರಿಯಲ್ಲಿ  ತಡೆಗೋಡೆ ಇಲ್ಲದೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎತ್ತಿನಹೊಳೆ ಯೋಜನೆಯ ಮುಖ್ಯ ರಸ್ತೆ ಕೆಸರುಗದ್ದೆಯಲ್ಲಿ ಓಡಾಡುತ್ತಿರುವ ಸ್ಥಳೀಯ ಗ್ರಾಮಸ್ಥರ ಸ್ಥಿತಿ ಶೋಚನೀಯ ಪರಿಸ್ಥಿತಿ ಎದುರಾಗಿದೆ ,
ರಸ್ತೆಯಲ್ಲಿ ಬೈಕ್ ಸಾವರಾರು ಬಿದ್ದು ಮೈ ಕೈ ಮುರಿದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಮಾತನಾಡಿದರು.

ರಸ್ತೆ ಸರಿಪಡಿಸುವಂತೆ ಧಿಕ್ಕಾರ ಕೂಗಿ ಆಕ್ರೋಶ .

ಕೊಡಲೇ ರಸ್ತೆ ಸರಿಪಡಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ ಮಾಡುವುದಾಗಿ   ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.


Share with

Tags:

Leave a Reply

Your email address will not be published. Required fields are marked *