
ಸಕಲೇಶಪುರ : ತಾಲೂಕು ಆನೆಮಹಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌಡಹಳ್ಳಿ ಗ್ರಾಮಾಂತರ ವ್ಯಾಪ್ತಿಯ ಭಾಗದಲ್ಲಿನ ಕೂಲಿ ಕಾರ್ಮಿಕರಾದ ಚೆನ್ನಮ್ಮ ಎಂಬುವರ ವಾಸದ ಮನೆ ಅತಿಯಾದ ಗಾಳಿ ಮಳೆಗೆ ಬಿದ್ದು ಹೋಗಿದ್ದು ಸ್ಥಳಕ್ಕೆ ಆನೆ ಮಹಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಆನೆಮಹಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಿಮ್ಮಯ್ಯ ಅವರು ಮಾತನಾಡಿ ಅತಿಯಾದ ಮಳೆಗೆ ಗ್ರಾಮದ ಚೆನ್ನಮ್ಮ ಎಂಬುವರ ಮನೆ ಬಾಗಶಹ ಬಿದ್ದು ಹೋಗಿದ್ದು ತಾಲೂಕು ಆಡಳಿತ ಕೂಡಲೇ ಇತ್ತ ಗಮನಹರಿಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.





