ಯೂಟ್ಯೂಬರ್ ಯದುಪ್ರಿಯಂ ಮೆಹ್ತಾ ಇತ್ತೀಚೆಗೆ 60,000ರೂ. ಮೌಲ್ಯದ ಒಂದು ಟವೆಲ್ ಖರೀದಿಸಿದ ವಿಡಿಯೋ ಹಂಚಿಕೊಂಡಿದ್ದರು.ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ, ರಿಚ್ ಕಿಡ್ಸ್ ಎಬ ಹೆಸರಿನ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಯದುಪ್ರಿಯಂ ಮೆಹ್ತಾ ತನ್ನ ತಾಯಿ ಜೊತೆಗೆ ಈ ದುಬಾರಿ ಟವಲ್ ಖರೀದಿಸುತ್ತಿರುವ ವಿಡಿಯೋ ಪೋಸ್ಟ್ ಮಾಡಲಾಗಿದೆ. ಅಲ್ಲದೆ, ಈ ವಿಡಿಯೋಗೆ ‘ ಹೌ ಮಚ್ ಲಕ್ಸುರಿ ಈಸ್ ಟೂ ಮಚ್ ಲಕ್ಸುರಿ’ ಎಂಬ ಶೀರ್ಷಿಕೆ ಕೂಡ ನೀಡಲಾಗಿದೆ.ಇದಕ್ಕೆ ಸಾಕಷ್ಟು ಜನರು ಕಾಮೆಂಟ್ ಗಳನ್ನು ಮಾಡಿದ್ದಾರೆ.
ಕೆಲವರಿಗೆ ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎಂಬುದೇ ತಿಳಿಯುದಿಲ್ಲ. ಐಷಾರಾಮಿ ಜೀವನಶೈಲಿ ಅನುಸರಿಸೋರು ಕೈಯಲ್ಲಿ ದುಡ್ಡಿರೋದೇ ಖರ್ಚು ಮಾಡೋಕೆ ಎಂಬ ಮನೋಭಾವ ಹೊಂದಿರುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಕೆಲವು ಯೂಟ್ಯೂಬರ್ಸ್ ಗಳು ಇಂಥ ಐಷಾರಾಮಿ ಜೀವನಶೈಲಿ ಬಗ್ಗೆಯೇ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುವ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ. ಲಕ್ಸುರಿ ಜೀವನಶೈಲಿಗೆ ಸಂಬಂಧಿಸಿದ ವಿಡಿಯೋಗಳ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿರುವ ಯೂಟ್ಯೂಬರ್ ಯದುಪ್ರಿಯಂ ಮೆಹ್ತಾ ಇತ್ತೀಚೆಗೆ 60,000 ರೂ. ಬೆಲೆಬಾಳುವ ಹರ್ಮೆಸ್ ಟವಲ್ ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ.
ಯದುಪ್ರಿಯಂ ಚಿರತೆಯ ಚಿತ್ರವಿರುವ ಟವಲ್ ಅನ್ನು 60,000ರೂ. ನೀಡಿ ಖರೀದಿಸಿದ್ದಾರೆ.ಈ ವಿಡಿಯೋಗೆ ಅನೇಕರು ನಾನಾ ರಾತಿಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬರು ಇದನ್ನು ಆತ ವಾಲ್ ಪೆಯಿಂಟಿಂಗ್ ಆಗಿ ಬಳಸುತ್ತಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇ.ಡಿ ಯಾಕೆ ಇಂಥ ಯೂಟ್ಯೂಬರ್ ಗಳ ಮೇಲೆ ಕಣ್ಣಿಡುವುದಿಲ್ಲ ಎಂದು ? ಇವರ ಮೇಲೇಕೆ ದಾಳಿ ನಡೆಸೋದಿಲ್ಲ? ಎಂದು ಪ್ರಶ್ನಿಸಿದ್ದಾರೆ.