ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಬಾಲಕಿ ಜಲಪಾತಕ್ಕೆ ಹಾರಿದ ಘಟನೆ ಛತ್ತೀಸ್ ಘರ್ ನಲ್ಲಿ ನಡೆದಿದೆ. ಅಲ್ಲಿದ್ದವರು ಎಷ್ಟೇ ಕೂಗಿಕೊಂಡರೂ ಈಕೆ ಲೆಕ್ಕಿಸದೇ 90 ಅಡಿಯಿಂದ ಧುಮುಕಿದ್ದಾಳೆ. ಪೋಷಕರು ಗದರಿದ್ದಕ್ಕೆ ಈಕೆ ಈ ಕೃತ್ಯಕ್ಕೆ ಮುಂದಾಗಿದ್ದಾಳೆ ಎನ್ನುವುದನ್ನು ಪೊಲೀಸರು ಸಾಬೀತುಪಡಿಸಿದ್ದಾರೆ. ಅದೃಷ್ಟಕ್ಕೆ ಬಾಲಕಿ ಬದುಕುಳಿದಿದ್ದಾಳೆ.
ಮೊಬೈಲ್ ನೋಡಬೇಡ ಎಂದು ಮಕ್ಕಳನ್ನು ಗದರುವಾಗಲೂ ಪೋಷಕರ ಕೈಯಲ್ಲಿ ಮೊಬೈಲ್ ಇದ್ದೇ ಇರುತ್ತದೆ. ಹೀಗಿದ್ದಾಗ ಪೋಷಕರು ಹೇಳಿದ್ದರ ಕಡೆ ಮಕ್ಕಳು ಗಮನವಾದರೂ ಹೇಗೆ ಹೋಗಬೇಕು? ಇದು ಇಂದಿನ ವಿಪರ್ಯಾಸವೇ ಸರಿ. ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ.
ಶಾಲಾಬಾಲಕಿಯೊಬ್ಬಳ ಪೋಷಕರು, ಜಾಸ್ತಿ ಮೊಬೈಲ್ ಬಳಸಬೇಡ ಎಂದು ಆಕೆಗೆ ಹೇಳಿದ್ದಕ್ಕೆ, ಬಾಲಕಿ ಮನನೊಂದು 90 ಅಡಿ ಇರುವ ಈ ಜಲಪಾತದಿಂದ ಹಾರಿ ಪ್ರಾಣ ಕಳೆದುಕೊಳ್ಳಲು ಪ್ರಯತ್ನಿಸಿದ್ದಾಳೆ. ಹೀಗಾದರೆ ಹೇಗೆ? ಮಕ್ಕಳಿಗೆ ತಿಳಿಹೇಳುವುದು ಬಹಳ ಕಷ್ಟವೇ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.