ದೇಶದಲ್ಲೇ ಅತಿ ದೊಡ್ಡದಾದ ಈ ಕಾಲ್ಗೆಜ್ಜೆ ಬೆಲೆ 8.5 ಲಕ್ಷ ರೂ.!

Share with

ಬೆಂಗಳೂರು: ಭಾರತೀಯ ಮಹಿಳೆಯರು ಸುಂದರವಾಗಿ ಕಾಣಲು ಬಳಸುವ ಪ್ರಮುಖ ಆಭರಣಗಳಲ್ಲಿ ಕಾಲುಗೆಜ್ಜೆ ಕೂಡ ಪ್ರಮುಖ ಭಾಗವಾಗಿದೆ. ಮಹಾರಾಷ್ಟ್ರದ ಅತಿದೊಡ್ಡ ಕಾಲುಗೆಜ್ಜೆಯನ್ನು ಅಧಿಕಮಾಸದ ಹಿನ್ನೆಲೆಯಲ್ಲಿ ಹತ್ತು ಕೆಜಿ ತೂಕದ ಈ ಕಾಲ್ಗೆಜ್ಜೆಯನ್ನು ತಯಾರಿಸಲಾಗಿದೆ.

ಭಾರತೀಯ ಸಂಸ್ಕೃತಿಯ ಈ ಆಭರಣದತ್ತ ಇಡೀ ವಿಶ್ವದ ಗಮನ ಸೆಳೆಯುವ ಸಲುವಾಗಿ ಮಹಾರಾಷ್ಟ್ರದ ಪುಣೆಯಲ್ಲಿ 10 ಕೆಜಿ ತೂಕದ ಅತಿ ದೊಡ್ಡ ಕಾಲ್ಗೆಜ್ಜೆಯನ್ನ ತಯಾರಿಸುತ್ತಿದೆ. ಅಧಿಕ ಮಾಸದ ಪ್ರಯುಕ್ತ ಈ ಬೃಹತ್ ಕಾಲ್ಗೆಜ್ಜೆಯನ್ನ ತಯಾರಿಸಲಾಗುತ್ತಿದೆ.

ಇದು ಪುಣೆಯ ಖ್ಯಾತ ಆಭರಣ ವ್ಯಾಪಾರಿ ತೇಜಪಾಲ್ ರಂಕಾ ಅವರ ಪರಿಕಲ್ಪನೆಯಾಗಿದೆ. 5 ಐವರು ಕುಶಲಕರ್ಮಿಗಳು ಸುಮಾರು 2 ತಿಂಗಳ ಕಾಲ ಹಗಲಿರುಳು ಶ್ರಮಿಸಿ ಈ ಕಾಲ್ಗೆಜ್ಜೆಯನ್ನ ಸಿದ್ಧಪಡಿಸಿದ್ದಾರೆ. ಈ ಒಂದು ಪ್ರಯೋಗಕ್ಕೆ 8 ಲಕ್ಷದ 50 ಸಾವಿರ ರೂಪಾಯಿ ವೆಚ್ಚವಾಗಿದೆ ಎಂದು ತೇಜ್ಪಾಲ್ ರಂಕಾ ತಿಳಿಸಿದ್ದಾರೆ


Share with

Leave a Reply

Your email address will not be published. Required fields are marked *