ತೆಕ್ಕಟ್ಟೆ: ತೆಕ್ಕಟ್ಟೆಯ ಹೈಕಾಡಿ ಎಂಬಲ್ಲಿ ಚಿನ್ನದ ಸರಕ್ಕೆ ಬಣ್ಣ ಹಾಕಿ ಕೊಡುತ್ತೇನೆ ಎಂದು ಹೇಳಿ ಮಹಿಳೆಯ ಚಿನ್ನದ ಸರ ಎಗರಿಸಿ ಕಳ್ಳರ ತಂಡವೊಂದು ಅಟೋ ರಿಕ್ಷಾದಲ್ಲಿ ಪರಾರಿಯಾಗಿದ್ದು, ಬಿದ್ಕಲ್ ಕಟ್ಟೆ ಪ್ರಮುಖ ಸರ್ಕಲ್ ಇಳಿದು ಬೇರೊಂದು ರಿಕ್ಷಾದಲ್ಲಿ ಪರಾರಿಯಾಗಿದ್ದು ಸಂಶಯಗೊಂಡ ಅಟೋ ಚಾಲಕರು ಕಳ್ಳರ ಜಾಡು ಹಿಡಿದು ಬೆನ್ನಟ್ಟಿದ ಘಟನೆ ನಡೆದಿದೆ.
ಎರಡು ಅಟೋ ರಿಕ್ಷಾವನ್ನು ಬದಲಿಸಿದ ಕಳ್ಳರು ಹಿಂದಿ ಭಾಷೆಯಲ್ಲಿ ವ್ಯವಹರಿಸುತ್ತಿದ್ದು ಹೈಕಾಡಿಯಿಂದ ಕಕ್ಕುಂಜೆ ಕ್ರಾಸ್ ಅಲ್ಲಿಂದ ಬಿದ್ಕಲ್ ಕಟ್ಟೆ ಬಂದಿಳಿದು ನಂತರ ಹುಣ್ಸೆಮಕ್ಕಿ ಕಡೆಗೆ ಅಟೋದಲ್ಲಿ ಸಾಗಿದ್ದಾರೆ.
ಈ ದ್ರಶ್ಶ ಸಿ.ಸಿ ಕೆಮರಾದಲ್ಲಿ ಸೆರೆಯಾಗಿದ್ದು ಅಟೋದಿಂದ ಬಿದ್ಕಲ್ ಕಟ್ಟೆ ಬಸ್ ಸ್ಟ್ಯಾಂಡ್ ನಲ್ಲಿ ಇಳಿದು ಮತ್ತೊಂದು ಅಟೋದಲ್ಲಿ ಇಬ್ಬರು ವ್ಯಕ್ತಿಗಳು ತೆರಳುವ ದೃಶ್ಯಗಳು ಸೆರೆಯಾಗಿದೆ.