ಹಟ್ಟಿಯಿಂದ ದನ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

Share with

ಸುಳ್ಯ ಪೊಲೀಸರು ಆರೋಪಿಗಳನ್ನು ಕೇರಳದಲ್ಲಿ ಬಂಧಿಸಿದ್ದಾರೆ.

ಸುಳ್ಯ: ಹಟ್ಟಿಯಿಂದ ದನ ಕಳ್ಳತನ ಮಾಡಿದ್ದ ಘಟನೆ ತಿಂಗಳ ಹಿಂದೆ ಸಂಪಾಜೆ ಕಲ್ಲುಗುಂಡಿಯ ಗೂನಡ್ಕದಲ್ಲಿ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಆರೋಪಿಗಳನ್ನು ಕೇರಳದಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಸುಳ್ಯ ಮರ್ಕುಂಜ ನಿವಾಸಿ ಗಣೇಶ್ ಕಾಯಾರ ಮತ್ತು ಕೇರಳದ ಚೆಂಬೇರಿಯ ನಿವಾಸಿ ಅಬ್ದುಲ್ ಬಂಧಿತ ಆರೋಪಿಗಳಾಗಿದ್ದು, ಸೆ.13ರಂದು ರಾತ್ರಿ ಎರಡು ಗಂಟೆ ವೇಳೆಗೆ ಗೂನಡ್ಕದ ವರದರಾಜ್ ಸಂಕೇಶ್ವರ್ ಅವರ ಮನೆಯ ಹಟ್ಟಿಯಲ್ಲಿದ್ದ ಎರಡು ಹಸುಗಳನ್ನು ಪಿಕಪ್ ಗೆ ತುಂಬಿ ಕದ್ದೊಯ್ಯಲಾಗಿತ್ತು.

ಆರೋಪಿಗಳ ಚಲನ ವಲನಗಳನ್ನು ಸಿ.ಸಿ ಕ್ಯಾಮೆರಾದಲ್ಲಿ ಸೆರೆ ಆಗಿದ್ದರಿಂದ ಇದೀಗ ಆರೋಪಿಗಳನ್ನು ಸುಳ್ಯ ಪೊಲೀಸರು ಬಂಧಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *