ರಾಜ್ ಬಿ ಶೆಟ್ಟಿ ತನ್ನ ಮೊದಲ ಚಿತ್ರ ʼಒಂದು ಮೊಟ್ಟೆಯ ಕಥೆʼಯ ಮೂಲಕ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ್ದರು. ಒಂದು ಸಾಧಾರಣ ಚಿತ್ರವಾಗಿದ್ದರೂ ಕೂಡಾ ತನ್ನ ವಿಶಿಷ್ಟ ಅಭಿನಯದ ಮೂಲಕ ಜನರ ಮನಸ್ಸಲ್ಲಿ ಮನೆ ಮಾಡಿದ್ದರು. ಬಳಿಕ ನಟ ನಿರ್ದೇಶಕ ವೃಷಭ್ ಶೆಟ್ಟಿ ಜೊತೆ ಗರುಡ ಗಮನ ವೃಷಭವಾಹನ ಚಿತ್ರದಲ್ಲಿ ಬಣ್ಣ ಹಚ್ಚಿ ತನ್ನ ರಗಡ್ ಲುಕ್‌ನಿಂದ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದೀಗ ರಾಜ್ ಬಿ ಶೆಟ್ಟಿಯವರ ಹೊಸ ಸಿನೆಮಾ ʼಟೋಬಿʼಯ ಫಸ್ಟ್ ಲುಕ್ ಬಿಡಗಡೆಯಾಗಿ ಸಂಚಲನ ಮೂಡಿಸಿದೆ.
ಕೊಂಚ ಭಿನ್ನ ಕಥೆಯಲ್ಲಿ ಬಣ್ಣ ಹಚ್ಚುತ್ತಿರುವ ಶೆಟ್ರು ಟೋಬಿ ಚಿತ್ರದ ಪೋಸ್ಟರ್‌ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದು ಬಳೆಯಂತಿರುವ ಓಲೆಯನ್ನು ತೊಟ್ಟಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ.
ಆ.25ರಂದು ʼಟೋಬಿʼ ಸಿನಿಮಾ ತೆರೆಗೆ ಬರಲಿದ್ದು, ಈ ಹಿಂದೆ ರಾಜ್ ಬಿ ಶೆಟ್ಟಿಯವರ ಬಳಿ ಕೆಲಸ ಮಾಡುತ್ತಿದ್ದ ಬಾಸಿಲ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಸಂಯುಕ್ತಾ ಹೊರನಾಡು, ಚೈತ್ರಾ ಜೆ ಆಚಾರ್ ‘ಟೋಬಿ’ ಸಿನಿಮಾದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ‘ಟೋಬಿ’ ಮೋಷನ್ ಪೋಸ್ಟರ್‌ಗೆ ಮಿಥುನ್ ಮುಕುಂದನ್ ನೀಡಿರುವ ಹಿನ್ನೆಲೆ ಸಂಗೀತ ಸಖತ್ ಟ್ರೆಂಡ್ ಸೃಷ್ಟಿ ಮಾಡಿದೆ.