ಯಾಂತ್ರೀಕೃತ ಭತ್ತದ ಬೇಸಾಯ ಕುರಿತು ‘ಯಂತ್ರಶ್ರೀ’ ಮಾಹಿತಿ ಕಾರ್ಯಕ್ರಮ

Share with

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ .ಟ್ರಸ್ಟ್ (ರಿ) ಬಂಟ್ವಾಳ ತಾಲೂಕು ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘ ಒಕ್ಕೂಟಗಳ ಸಹಯೋಗದೊಂದಿಗೆ ಬಿ ಸಿ ರೋಡ್ ಮೈಯರ ಬೈಲು ರಾಜಗೋಪಾಲ್ ಹೊಳ್ಳ ರವರ ಜಮೀನಿನಲ್ಲಿ ಯಂತ್ರದ ಮೂಲಕ ಭತ್ತದ ಕೃಷಿ ನಾಟಿ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ಸಿ ಹೆಚ್ ಎಸ್ ಸಿ ಕೇಂದ್ರದ ಯೋಜನಾಧಿಕಾರಿ ಮೋಹನ್ ದೀಪ ಪ್ರಜ್ವಲನೆ ಮಾಡಿ ಯಂತ್ರಶ್ರೀ ಮೂಲಕ ಕೃಷಿ ಮಾಡುದರಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ಸಿ .ಎಚ್ ಎಸ್ .ಸಿ ಯಂತ್ರಶ್ರೀ ಕಾರ್ಯಕ್ರಮದ ಮೇಲ್ವಿಚಾರಕರಾದ ಉಮೇಶ್ ರವರು ಭತ್ತದ ಸಸಿ ಮಾಡುವ ತಯಾರಿಕೆಯನ್ನು ಪ್ರಾತ್ಯಕ್ಸಿಕೆಯ ಮೂಲಕ ವಿವರಿಸಿದರು.

ಕಾರ್ಯಕ್ರಮದಲ್ಲಿ ರಾಜಗೋಪಾಲ್ ಹೊಳ್ಳ, ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷರಾದ ರಾಜೇಶ್ ಪಂಜಿಕಲ್ಲು ,ಒಕ್ಕೂಟ ಅಧ್ಯಕ್ಷರಾದ ಹೇಮಾವತಿ ಉಪಸ್ಥಿತರಿದ್ದರು,
ಸೇವಾ ಪ್ರತಿನಿಧಿ ವನಜಾಕ್ಷಿ ಸ್ವಾಗತಿಸಿ,ಅಮ್ಟಾಡಿ ಸೇವಾಪ್ರತಿನಿಧಿ ವನಿತಾ ವಂದಿಸಿ,ಯೋಜನೆಯ ಬಂಟ್ವಾಳ ತಾಲೂಕ್ ಕೃಷಿ ಮೇಲ್ವಿಚಾರಕ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.


Share with