ಬೆಂಗಳೂರಿನ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನವನ್ನು ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಸಂಜೆ ಉದ್ಘಾಟಿಸಿದ್ದು.
ತದನಂತರ ಲಾಲ್ಬಾಗ್ ಉದ್ಯಾನವನಕ್ಕೆ ನಿನ್ನೆ (ಶನಿವಾರ) ಒಂದೇ ದಿನ ಇಪ್ಪತ್ತೆಂಟು ಸಾವಿರ ಜನ ಬಂದು ವೀಕ್ಷಣೆ ಮಾಡಿದ್ದಾರೆಂದು ರಾಜ್ಯ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ. ಜಗದೀಶ್ ಹೇಳಿದ್ದಾರೆ.
ಈ ಬಾರಿ ಕೆಂಗಲ್ ಹನುಮಂತಯ್ಯ ಅವರ ಫಲಪುಷ್ಪ ಕಲಾಕೃತಿ ಇರುವುದರಿಂದ ಅವರ ಮಗಳು ವಿಜಯಲಕ್ಷ್ಮಿ ಆಗಮಿಸಿ, ತಂದೆಯ ಸಾಧನೆಗಳ ಪುಷ್ಪ ಕಲಾಕೃತಿಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.