ಉಡುಪಿ: ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ ನಡೆದಿದೆ.
ಮೃತರನ್ನು ಶಿರ್ಲಾಲು ನಿವಾಸಿಗಳಾದ ಹರೀಶ್ ಪೂಜಾರಿ (48) ಹಾಗೂ ಅವರ ಸಹೋದರಿ ಪುತ್ರ ರಿತೇಶ್ (18) ಎಂದು ಗುರುತಿಸಲಾಗಿದೆ. ಇವರು ಸ್ಥಳೀಯ ಶಿರ್ಲಾಲು ಗ್ರಾಮದ ಉಬ್ರೇಲು ಗುಂಡಿ ಕೆರೆಗೆ ಮೀನು ಹಿಡಿಯಲು ತೆರಳಿದ್ದರು. ಮೀನು ಹಿಡಿಯುತ್ತಿದ್ದ ವೇಳೆ ರಿತೇಶ್ ಆಕಸ್ಮಿಕವಾಗಿ ಮುಳುಗಿದ್ದು, ಆತನನ್ನು ರಕ್ಷಿಸಲು ಹೋದ ಹರೀಶ್ ಪೂಜಾರಿ ಅವರೂ ನೀರಿನಲ್ಲಿ ಮುಳುಗಿ ಇಬ್ಬರೂ ಸಾವನ್ನಪ್ಪಿದ್ದಾರೆ. ಅಜೆಕಾರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.