ಪುತ್ತೂರು: ಅಕ್ರಮ ವ್ಯವಹಾರದ ಆರೋಪದಲ್ಲಿ ಬನ್ನೂರು ಕರ್ಮಲದ ಪೊಲೀಸ್ ವಸತಿ ನಿಲಯದ ಸಮೀಪದ ಬಾಡಿಗೆ ಮನೆಯೊಂದರ ಮೇಲೆ ಗುರುವಾರ (ಆ 29) ನಗರ ಠಾಣಾ ಪೊಲೀಸರು ದಾಳಿ ನಡೆಸಿ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ.
ಕೆಲವು ದಿನಗಳಿಂದ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದೆ ಎಂಬ ಬಗ್ಗೆ ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಇಬ್ಬರು ಮಹಿಳೆಯರು ಮಾತ್ರ ಇದ್ದು ಬೇರೆ ಯಾರೂ ಕಂಡು ಬಂದಿಲ್ಲ.
ವಿಚಾರಣೆ ವೇಳೆ ಇನ್ನೋರ್ವ ಮಹಿಳೆ ಮನೆಯೊಡತಿಯ ಗೆಳತಿ ಎಂದು ಹೇಳಿದ್ದಾಳೆನ್ನಲಾಗಿದೆ. ಇಬ್ಬರು ಮಹಿಳೆಯರ ಪೈಕಿ ಒಬ್ಬರು ಮುಸ್ಲಿಂ, ಇನ್ನೂಬ್ಬರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ್ದು ಇವರಿಬ್ಬರು ಒಂದೇ ಮನೆಯಲ್ಲಿ ವಾಸವಾಗಿದ್ದು ಅನುಮಾನಕ್ಕೆ ಈಡಾಗಿತ್ತು ಎನ್ನಲಾಗಿದೆ.