ಉಪ್ಪಳ: ಕೋಡಿಬೈಲು ಯಶೋನಂದ ನಗರ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ 41ನೇ ವಾರ್ಷಿಕ ಏಕಾಹ ಭಜನೆ ಮಾ.10 ಮತ್ತು 11ರಂದು ನಡೆಯಲಿದೆ.
10ರಂದು ಪೂರ್ವಾಹ್ನ 5ಕ್ಕೆ ಗಣಹೋಮ, ಸೂರ್ಯೋದಯ 6.43ಕ್ಕೆ ಬಾಬು ಶೆಣೈ ಮಲ್ಲಂಗೈ ಇವರಿಂದ ದೀಪ ಪ್ರಜ್ವಲನೆ ಬಳಿಕ ಭಜನೆ ಪ್ರಾರಂಭ, ಪ್ರತಿ ಜಾವಕ್ಕೂ ಜಾಮ ಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಮಧ್ಯಾಹ್ನ, ರಾತ್ರಿ ಅನ್ನಸಂತರ್ಪಣೆ, 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
11ರಂದು ಬೆಳಿಗ್ಗೆ 6.42ಕ್ಕೆ ಮಂಗಳಾಚರಣೆ, ದೀಪ ವಿಸರ್ಜನೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಆನಂದ ಭಜನೆ ನಡೆಯಲಿದೆ.