ಉಪ್ಪಳ: ವಿವಿಧ ಪ್ರದೇಶದಲ್ಲಿ ಅಗ್ನಿ ದುರಂತ; ಅಗ್ನಿಶಾಮಕದಳ ನಡೆಸಿದ ಕಾರ್ಯಾಚರಣೆಯಿಂದ ತಪ್ಪಿದ ಅಪಾಯ

Share with

ಉಪ್ಪಳ: ನಾಲ್ಕು ಕಡೆಗಳಲ್ಲಿ ಅಗ್ನಿ ದುರಂತ ಸಂಭವಿಸಿದ್ದು ಉಪ್ಪಳ ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಅಪಾಯ ತಪ್ಪಿದೆ. ಫೆ.19ರಂದು ಮಧ್ಯಾಹ್ನದಿಂದ ಸಂಜೆ ತನಕ ವಿವಿಧ ಕಡೆ ಅಗ್ನಿದುರಂತ ಉಂಟಾಗಿದೆ.

ವಿವಿಧ ಪ್ರದೇಶದಲ್ಲಿ ಅಗ್ನಿ ದುರಂತ

ಪೈವಳಿಕೆಯ ಸುಂಕದಕಟ್ಟೆಯ ಶಕೀರ್, ಪಾವೂರು ಗೇರುಕಟ್ಟೆಯ ಮುಬಾರಕ್ ಎಂಬವರ ಹುಲ್ಲು, ಕಾಡುಪೊದೆ ತುಂಬಿದ ಖಾಲಿ ಹಿತ್ತಿಲು ಬಾಯಿಕಟ್ಟೆಯ ಅಬ್ದುಲ್ ಸಮದ್ ಎಂಬರವ ಬಯಲುನಲ್ಲಿ ಹುಲ್ಲು ಬೆಂಕಿಗಾಹುತಿಯಾಗಿದೆ.

ಕೂಡಲೆ ಅಲ್ಲಿಗೆ ಉಪ್ಪಳ ಅಗ್ನಿಶಾಮಕದಳದ ಸ್ಟೇಷನ್ ಆಫೀಸರ್ ರಾಜೇಶ್ ಹಾಗೂ ತಂಡ ತಲುಪಿ ನಡೆಸಿದ ಕಾರ್ಯಾಚರಣೆಯಲ್ಲಿ ಪರಿಸರದ ಮನೆಗಳ ಸಮೀಫಕ್ಕೆ ಹರಡುವುದು ತಪ್ಪಿದೆ. ಸಂಜೆ ಕುಬಣೂರುನಲ್ಲಿ ಇತ್ತೀಚೆಗೆ ತ್ಯಾಜ್ಯ ಉರಿದ ಸ್ಥಳದಲ್ಲಿ ಮತ್ತೆ ಹೊಗೆ ಕಾಣಿಸಿಕೊಂಡಿದೆ. ಅಲ್ಲಿಗೂ ಅಗ್ನಿಶಾಮಕ ದಳ ತೆರಳಿ ನೀರು ಹಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *