ಕ್ಯಾನ್‌ಬೆರಾ: ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ವಿಧಿಸಿದ ಬೆನ್ನಲ್ಲೇ ನಾಯಿ, ಬೆಕ್ಕು, ಪೋಷಕರ ಫೋಟೋ ಬಳಸಿ ಮಕ್ಕಳು ತಮ್ಮ ಖಾತೆಗಳನ್ನು ತೆರೆಯುತ್ತಿದ್ದಾರೆ. ಇನ್ನು ಕೆಲವರು 17 ವರ್ಷ ತುಂಬಿದ ವ್ಯಕ್ತಿಯಂತೆ ಮೇಕಪ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈಗಾಗಲೇ ಅಸ್ಟ್ರೇಲಿಯಾದಲ್ಲಿ ಲಕ್ಷಾಂತರ ಹದಿಹರೆಯದವರ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಅವರ ಖಾತೆಗಳನ್ನು ಸರಕಾರ ಅಳಿಸಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಬಳಕೆ ಮಾಡಲು ಹೊಸ ತಂತ್ರಗಳನ್ನು ಮಕ್ಕಳು ಕಂಡುಕೊಂಡಿದ್ದಾರೆ ಎನ್ನಲಾಗಿದೆ. ವಿಪಿಎನ್‌ಗಳನ್ನು ಬಳಕೆ ಮಾಡುವ ಮೂಲಕವೂ ಜಾಲತಾಣ ಬಳಕೆ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
16 ವರ್ಷದೊಳಗಿನ ಬಳಕೆದಾರರು ಹೊಂದಿರುವ ಖಾತೆಗಳನ್ನು ತೆಗೆದುಹಾಕಲು ಮತ್ತು ಹೊಸ ನೋಂದಣಿಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳುತ್ತಿದ್ದು, ಇದನ್ನು ತಪ್ಪಿಸಿಯೂ ಸಾಮಾ ಜಿಕ ಜಾಲತಾಣ ಬಳಕೆ ಮಾಡಿದರೆ 445 ಕೋಟಿ ರೂ. (49.5 ಮಿ.ಡಾಲರ್)ವರೆಗೆ ದಂಡ ವಿಧಿಸಲಾಗುತ್ತದೆ.




