ಗೋವಾ ಕ್ಲಬ್ ಹತ್ತಿ ಉರಿಯುತ್ತಿರುವಾಗಲೇ ಮಾಲೀಕರಿಂದ ಟಿಕೆಟ್ ಬುಕ್..!

Share with

ಪಣಜಿ: ಗೋವಾದಲ್ಲಿನ ನೈಟ್‌ಕ್ಲಬ್ ಹೊತ್ತಿ ಉರಿಯುತ್ತಿರುವ ಸಮಯದಲ್ಲೇ ಅದರ ಮಾಲಕರು ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ದುರಂತದ ಬಳಿಕ ಬಂಧನದಿಂದ ತಪ್ಪಿಸಿಕೊಳ್ಳಲು ಯೋಜಿಸಿದ್ದ ಲೂಥಾ ಸೋದರರು ಥಾಯ್ಲೆಂಡ್‌ಗೆ ಟಿಕೆಟ್‌ ಬುಕ್ ಮಾಡಿದರು. ಈ ವೇಳೆ ಬೆಂಕಿ ನಂದಿಸಲು ಸಿಬಂದಿ ಕಷ್ಟ ಪಡುತ್ತಿದ್ದರು ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮಧ್ಯರಾತ್ರಿ 1.17ಕ್ಕೆ ಮೇಕ್ ಮೈ ಟ್ರಿಪ್ ವೆಬ್‌ಸೈಟ್ ಮೂಲಕ ಲೂಥಾ ಸೋದರರು ಟಿಕೆಟ್ ಬುಕ್ ಮಾಡಿ, ಬೆಳಿಗ್ಗೆ 5.30ಕ್ಕೆ ದಿಲ್ಲಿಯಿಂದ ಹೊರಡುವ ವಿಮಾನದಲ್ಲಿ ದೇಶ ತೊರೆದರು ಎನ್ನಲಾಗಿದೆ. ಇವರ ಪತ್ತೆಗೆ ಭಾರತವು ಇಂಟರ್‌ಪೋಲ್ ಸಹಾಯದಿಂದ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದೆ.

ನೈಟ್‌ಕ್ಲಬ್ ಮಾಲಕರಾದ ಸೌರಭ್ ಮತ್ತು ಗೌರವ್ ಲೂಥಾ ಸಲ್ಲಿಸಿದ್ದ ನಿರೀಕ್ಷಣ ಜಾಮೀನು ಅರ್ಜಿಗೆ ತತ್‌ಕ್ಷಣದ ಮಧ್ಯಾಂತರ ಪರಿಹಾರ ನೀಡಲು ದಿಲ್ಲಿ ಕೋರ್್ರ ನಿರಾಕರಿಸಿದೆ. ಈ ಮಧ್ಯೆ ಸಹ-ಮಾಲಕ ಅಜಯ್ ಗುಪ್ತಾರನ್ನು ದಿಲ್ಲಿಯಲ್ಲಿ ಬಂಧಿಸಿದ್ದು, ಗೋವಾಕ್ಕೆ ಕರೆತರಲು 36 ಗಂಟೆ ಟ್ರಾನ್ಸಿಟ್‌ರಿಮಾಂಡ್ ನೀಡ-ಲಾಗಿದೆ. ಈಗಾಗಲೇ ಕ್ಲಬ್‌ನ 5 ಸಿಬಂದಿ ಮತ್ತು ವ್ಯವಸ್ಥಾಪಕ ಮಂಡಳಿಯ ಸದಸ್ಯರನ್ನು ಬಂಧಿಸಲಾಗಿದೆ.


Share with

Leave a Reply

Your email address will not be published. Required fields are marked *