ಮಕ್ಕಳ ದಿನಾಚರಣೆ ಅಂಗವಾಗಿ ಫೋಟೋಗ್ರಾಫರ್ಸ್ ನಿಂದ ಮಕ್ಕಳಿಗೆ ವಿವಿಧ ಸ್ಪರ್ಧೆಗಳು

Share with

ಉಪ್ಪಳ : ಆಲ್ ಕೇರಳ ಫೋಟೋಗ್ರಾಫರ್ಸ್‌ ಅಸೋಸಿಯೇಷನ್ ವೆಸ್ಟ್ ಯೂನಿಟ್ ಕಾಸರಗೋಡು ಇದರ ವತಿಯಿಂದ ನವಂಬರ್ 14 ಮಕ್ಕಳ ದಿನಾಚರಣೆ ಪ್ರಯುಕ್ತ ಕಾಸರಗೋಡು ವಲಯ ಸದಸ್ಯರ 1 ನೇ ತರಗತಿಯಿಂದ 4 ನೇ ತರಗತಿಯ ಮಕ್ಕಳಿಗೆ ಚಿತ್ರರಚನೆ ಸ್ಪರ್ಧೆಯನ್ನು ಆಯೋಜಿಸಲಾಯಿತು. ಕಾಸರಗೋಡು ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ನಡೆಯಿತು.

ಈ ಕಾರ್ಯಕ್ರದಲ್ಲಿ ಯೂನಿಟ್ ಅಧ್ಯಕ್ಷರಾದ ಮೈಂದಪ್ಪ ಕೆ.ಎಂ ಅವರು ಅಧ್ಯಕ್ಷತೆ ವಹಿಸಿ ಮಕ್ಕಳ ದಿನಾಚರಣೆ ಹಾಗೂ ಯೂನಿಟಿನ ಕಾರ್ಯಪ್ರವೃತ್ತಿಯ ಕುರಿತು ಮಾತನಾಡಿದರು. ಮಧೂರು ಪಂಚಾಯತ್ 15 ನೇ ವಾರ್ಡ್ ಸದಸ್ಯೆ ಜನನಿ ಅನಿಲ್ ಐಫೋಕಸ್, ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ರತೀಶ್ ರಾಮು ವಿಡಿಯೋ, ಎಕೆಪಿಎ ಕಾಸರಗೋಡು ವಲಯ ಅಧ್ಯಕ್ಷರಾದ ವಾಸು ಕಾರ್ಯದರ್ಶಿ ರೇಖಾ ಮುಳ್ಳೇರಿಯಾ, ಪಿ.ಆರ್.ಒ ಚಂದ್ರಶೇಖರ.ಎಂ, ಯೂನಿಟ್ ಕೋಶಾಧಿಕಾರಿ ಅಮಿತ್, ಯೂನಿಟ್ ಸದಸ್ಯರಾದ ಸಾಯಿ ಪ್ರಸಾದ್, ಪ್ರೀತಿಚಂದ್ರನ್, ಹೇಮಂತ್, ಉದಯ ಉಪಸ್ಥಿತರಿದ್ದರು. ಕಲಾವಿದರಾದ ನವೀನ್ ಚಂದ್ರ ಆಚಾರ್ಯ ನಾಯ್ಕಾಪು ಹಾಗೂ ಯೋಗೀಶ್ ಆಚಾರ್ಯ ನೆಲ್ಲಿಕುಂಜೆ ಇವರು ತೀರ್ಪಗಾರರಾಗಿ ಸಹಕರಿಸಿದರು.

ಸ್ಪರ್ಧೆಯಲ್ಲಿ ಪ್ರಥಮ ಆಶ್ರಿತ್ ರೈ ಮಧೂರು,ದ್ವಿತೀಯ ಅನಗ್ ತೃತೀಯ ತೃಷನ್ ಆಚಾರ್ಯ ಕೆ. ಮತ್ತು ಆಧೀಶ್ ಎಚ್. ಮನಸ್ವಿ ಯು.ಎಸ್. ಅಲ್ವಿನ್ ಚಂದ್ರ, ತನಿಷ್ಕಾ ಎ.ಪ್ರಣಿತ.ಎಸ್ ಎಂಬೀ ಪುಟಾಣಿಗಳು ಪ್ರೋತ್ಸಾಹಕ ಬಹುಮಾನಗಳಿಸಿದರು, ಯೂನಿಟ್ ಕಾರ್ಯದರ್ಶಿ ವಸಂತ್‌ ಕೆರೆಮನೆ ಪ್ರಸ್ತಾವಿಕವನ್ನಾಡಿ ಸ್ವಾಗತಿಸಿ ಯೂನಿಟ್ ಉಪಾಧ್ಯಕ್ಷರಾದ ಗಣೇಶ್ ರೈ ಧನ್ಯವಾದ ನೀಡಿದರು.


Share with

Leave a Reply

Your email address will not be published. Required fields are marked *