ಬಂಟ್ವಾಳ : ಫೆ.8ರಂದು ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚರಿಸಿತು.
ವೀರಕಂಭ ಗ್ರಾಮ ಪಂಚಾಯತ್ ಆವರಣ ತನಕ ದ್ವಿ ಚಕ್ರ ವಾಹನ ಜಾಥಾದ ಮೂಲಕ ಸಂವಿಧಾನ ಜಾಗೃತಿ ಜಾಥಾವನ್ನು ಬರಮಾಡಿಕೊಂಡು. ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಅಂಬೇಡ್ಕರ್ ಪ್ರತಿಮೆಗೆ ಹೂ ಮಾಲೆ ಹಾಕಿ ಸ್ವಾಗತಿಸಿದರು. ನಂತರ ಗಿರೀಶ್ ನಾವಡ ಮತ್ತು ಬಳಗ ಕರಾವಳಿ ಜಾನಪದ ಕಲಾವೇದಿಕೆ ಸುರತ್ಕಲ್ ಇವರು ಸವಿಂದಾನ ಮತ್ತು ಸರಕಾರ ಎಂಬ ವಿಷಯದ ಬಗ್ಗೆ ಪ್ರಸ್ತುತಪಡಿಸುವ ಬೀದಿ ನಾಟಕಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರಘು ಪೂಜಾರಿ, ಅಬ್ದುಲ್ ರೆಹಮಾನ್, ಶೀಲಾ ನಿರ್ಮಲ ವೇಗಸ್, ಗೀತಾ ಜಿ ಗಾಂಭೀರ್, ಮಾಜಿ ಸದಸ್ಯರಾದ ರಾಮಚಂದ್ರ ಪ್ರಭು, ವೀರಕಂಬ ಗ್ರಾಮ ಸಮುದಾಯ ಆರೋಗ್ಯ ಅಧಿಕಾರಿ ಹರ್ಷಿತಾ, ಗ್ರಾಮ ಅಭಿವೃದ್ಧಿ ಅಧಿಕಾರಿ ಪುಷ್ಪಾ, ಸ್ನೇಹ ಸಂಜೀವಿನಿ ಒಕ್ಕೂಟದ ಸದಸ್ಯರುಗಳು, ವಿರಕಂಬ ಗ್ರಾಮ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು, ಪಂಚಾಯತ್ ಉದ್ಯೋಗಿಗಳು, ಸಾರ್ವಜನಿಕರು ಭಾಗವಹಿಸಿ ಜಾಗೃತಿ ಜಾಥವನ್ನು ಯಶಸ್ವಿ ಗೊಳಿಸಿದರು.