ವಿಟ್ಲ: ರಿಕ್ಷಾಗಳ ನಡುವೆ ಅಪಘಾತ ಸಂಭವಿಸಿ ಹಲವು ಮಂದಿ ಗಾಯಗೊಂಡ ಘಟನೆ ವಿಟ್ಲ-ಅಡ್ಯನಡ್ಕ ರಸ್ತೆಯ ಪಡಿಬಾಗಿಲು ಎಂಬಲ್ಲಿ ಸಂಭವಿಸಿದೆ.
ಎರುಂಬು ನಿವಾಸಿ ಹಮೀದ್ ಎರುಂಬು ಮತ್ತು ಪಡಿಬಾಗಿಲು ನಿವಾಸಿ ರವಿ ಪಡಿಬಾಗಿಲು ಅವರ ರಿಕ್ಷಾಗಳಾಗಿವೆ. ನೇರ ರಸ್ತೆಯಲ್ಲಿ ಢಿಕ್ಕಿ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಒಂದು ರಿಕ್ಷಾ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ. 10 ಮಂದಿ ಗಾಯಗೊಂಡಿದ್ದು, ಅದರಲ್ಲಿ ಒಬ್ಬರ ಪರಿಸ್ಥಿತಿ ಚಿಂತಾಜನಕ ಇದೆ ಎಂದು ಹೇಳಲಾಗಿದೆ. ಗಾಯಗೊಂಡವರನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.