
ಮಂಗಳೂರು: ಸುರತ್ಕಲ್ ಸಮೀಪದ ಚಿತ್ರಾಪುರ ಬೀಚ್ ಗೆ ವಿಟ್ಲ ಮೂಲದ ವಿದ್ಯಾರ್ಥಿಗಳು ತೆರಳಿದ್ದು, ನೀರಿನಲ್ಲಿ ಆಟವಾಡುತ್ತಿದ್ದಾಗ ನೀರಿನ ಅಲೆಯ ರಭಸಕ್ಕೆ ಓರ್ವ ವಿದ್ಯಾರ್ಥಿನಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ನೇಪಾಳ ಮೂಲದ ವಿಟ್ಲದಲ್ಲಿ ನೆಲೆಸಿರುವ ನಿಶಾ (15) ಎಂದು ಗುರುತಿಸಲಾಗಿದೆ ಹಾಗೂ ವಿಟ್ಲ ಮೂಲದ ತೇಜಸ್ ಎಂಬ ಬಾಲಕನನ್ನು ಮುಕ್ತ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದ್ದು ಉಳಿದ ನಾಲ್ಕು ಜನ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ವಿಟ್ಲ ಮೂಲದ ದಿಗಂತ (15), ದಿವ್ಯರಾಜ್ (15), ತೇಜಸ್ (14), ಕೀರ್ತನ್ (16), ಅಶಿತಾ (15), ನಿಶಾ (15) ಇವರೆಲ್ಲರೂ ಕುಳಾಯಿ ಚಿತ್ರಾಪುರ ಬೀಚ್ ಗೆ ನೀರಿನಲ್ಲಿ ಆಟವಾಡಲು ತೆರಳಿದ್ದರು. ಆಟವಾಡುತ್ತಿದ್ದಾಗ ನೀರಿನ ಅಲೆಯ ರಭಸಕ್ಕೆ ಮುಳುಗಿದ್ದು, ಹತ್ತಿರದ ಮೀನುಗಾರರು ಹಾಗೂ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.