ಕಾಸರಗೋಡು: ರಾಘವೇಂದ್ರ ಸ್ವಾಮಿಯ 352ನೇ ಆರಾಧನೋತ್ಸವ ಕೂದ್ಲು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ ಸೆ. 1ರಂದು ಜರಗಿತು. ಬೆಳಗಿನಿಂದಲೇ ಭಜನೆ, ತಾಳಮದ್ದಳೆ, ಹರಿಕಥೆ ಮೊದಲಾದ ಕಾರ್ಯಕ್ರಮಗಳು ಜರಗಿದವು. ಸಂಜೆ ನಡೆದ ಸಭಾಕಾರ್ಯಕ್ರಮ ದಲ್ಲಿ ಊರಿನ ಈರ್ವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ರಂಗ ನಟರಾದ ಸುಬ್ಬಣ್ಣ ಶೆಟ್ಟಿ ಕುಚಿಕ್ಕಾಡ್ ಮತ್ತು ನಾಟಿವೈದ್ಯೆ ಯಮುನಾ ಶೆಟ್ಟಿ ಇವರ ಸಾಧನೆಯನ್ನು ಗುರುತಿಸಿ ಅಭಿನಂದಿಸಲಾಯಿತು.
ಅಧ್ಯಕ್ಷತೆ ಯನ್ನು ಜಿ ಕೆ. ಭಟ್ ಸೇರಾಜೆ ಇವರು ವಹಿಸಿದರು. ಮುಖ್ಯ ಅತಿಥಿ ಗಳಾಗಿ ಸುಧಾಕರ್ ರಾವ್ ಪೇಜಾವರ, ಸುಧಾಕರ ಕೋಟೆಕುಂಜತಾಯ, ಸುಲೋಚನಿ ಕೊಲ್ಯ ಮೊದಲಾದವರಿದ್ದರು.
ಟ್ರಸ್ಟ್ ನ ಅಧ್ಯಕ್ಷ ಮಹಾಬಲ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಗುರುರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು. ರಾಘವೇಂದ್ರ ಸ್ವಾಮಿಯ ಮಹಾಪೂಜೆಯೊಂದಿಗೆ ಕಾರ್ಯಕ್ರಮ ಮುಕ್ತಯವಾಯಿತು.