ದೆಹಲಿ: ‘ಭಾರತೀಯರು ಅಮೆರಿಕ ವೀಸಾ ಪಡೆದು ಅಲ್ಲಿಗೆ ಹೋಗುವುದಲ್ಲ, ಭಾರತೀಯರನ್ನು ಅಮೆರಿಕವೇ ವೀಸಾ ನೀಡಿ ಬರಮಾಡಿಕೊಳ್ಳುವ ಮಟ್ಟಕ್ಕೆ ನಾವು ದೇಶವನ್ನು ಕೊಂಡೊಯ್ಯಬೇಕು ಎಂಬ ಇಂಗಿತವನ್ನು ಮೋದಿಯವರು ಪ್ರಧಾನಿ ಆಗುವ ಮೊದಲು 2014ರಲ್ಲೇ ವ್ಯಕ್ತಪಡಿಸಿದ್ದರು. ಇದೀಗ ಮೋದಿಜಿಯವರ ನಿರಂತರ 9 ವರ್ಷಗಳ ಕ್ಷಮತೆ, ದಕ್ಷತೆ ಹಾಗೂ ದೂರದೃಷ್ಟಿಯ ಪರಿಣಾಮ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ವೃದ್ಧಿಸಿದೆ ಎಂಬುದಕ್ಕೆ ಅವರ ಈ ಬಾರಿಯ ಅಮೆರಿಕ ಪ್ರವಾಸವೇ ಸಾಕ್ಷಿ.
ಭಾರತದ ಜೊತೆ ಹಲವು ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಳ್ಳುವುದು ಒಬಾಮಾ ಅವರಿಂದ ಬೈಡನ್ವರೆಗೆ ಎಲ್ಲಾ ಅಮೆರಿಕ ಅಧ್ಯಕ್ಷರಿಗೆ ಹೆಚ್ಚುಗಾರಿಕೆಯಾಗಿದೆ. ಅಮೆರಿಕ ಸರ್ಕಾರ ಮಾತ್ರವಲ್ಲ, ಖಾಸಗಿ ವಲಯದ ಗಣ್ಯರು, ಹೂಡಿಕೆದಾರರು ಹಾಗೂ ಚಿಂತಕರು ಕೂಡ ಮೋದಿಜಿ ಜೊತೆ ಭೇಟಿಯಾಗಲು ಉತ್ಸುಕರಾಗಿದ್ದಾರೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.