ಇನ್ನೂ 100 ರೂ. ಬೆಲೆಯ ಔಷಧಿ ಸಿಗುತ್ತೆ ಕೇವಲ 15 ರೂ.ಗೆ!! ಕೇಂದ್ರ ಸರಕಾರದ ಮಹತ್ವದ ಘೋಷಣೆ

Share with

ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಕಡಿಮೆ ಬೆಲೆಗೆ ಔಷಧಗಳನ್ನು ಮಾರುವ ಮೆಡಿಕಲ್ ಶಾಪ್‌ಗಳನ್ನು ದೇಶಾದ್ಯಂತ ತೆರೆಯಲಾಗುವುದು ಎಂದು ಘೋಷಿಸಿದ್ದಾರೆ.

ಕೇಂದ್ರ ಸರ್ಕಾರ ಜನೌಷಧಿ ಕೇಂದ್ರ ಯೋಜನೆ ಮೂಲಕ ಮೆಡಿಕಲ್ ಶಾಪ್’ಗಳನ್ನ ತೆರೆಯುತ್ತಿರುವುದು ಗೊತ್ತೇ ಇದೆ. ಈ ಮೆಡಿಕಲ್ ಶಾಪ್’ಗಳಲ್ಲಿ ಕಡಿಮೆ ದರದಲ್ಲಿ ಔಷಧಗಳು ದೊರೆಯುತ್ತವೆ. ದೇಶದಾದ್ಯಂತ 25,000 ಜನೌಷಧಿ ಕೇಂದ್ರಗಳನ್ನ ತೆರೆಯಲಾಗುವುದು ಎಂದು ನರೇಂದ್ರ ಮೋದಿ ಘೋಷಿಸಿದ್ದಾರೆ. ಜನೌಷಧಿ ಕೇಂದ್ರಗಳು ದೇಶದ ಮಧ್ಯಮ ವರ್ಗದ ಜನರಿಗೆ ಹೊಸ ಶಕ್ತಿ ನೀಡುತ್ತಿದ್ದು, 20,000 ಕೋಟಿ ಉಳಿತಾಯವಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಪ್ರಸ್ತುತ 10 ಸಾವಿರ ಜನೌಷಧಿ ಕೇಂದ್ರಗಳಿದ್ದು, ಇವುಗಳನ್ನ 25 ಸಾವಿರ ಕೇಂದ್ರಗಳಿಗೆ ವಿತರಿಸಲಾಗುವುದು ಎಂದರು. ಈ ಜನೌಷಧಿ ಕೇಂದ್ರಗಳು ಮಧ್ಯಮ ವರ್ಗದ ಜನರಿಗೆ ವಿಶೇಷ ಶಕ್ತಿ ನೀಡಿದ್ದು, ಈ ಕೇಂದ್ರಗಳ ಮೂಲಕ 100 ಮೌಲ್ಯದ ಔಷಧಿಗಳು ಕೇವಲ 10 ರಿಂದ 15 ರೂಪಾಯಿಗೆ ಲಭ್ಯವಿರುತ್ತವೆ ಎಂದು ಮೋದಿ ಘೋಷಿಸಿದರು.


Share with

Leave a Reply

Your email address will not be published. Required fields are marked *