ಪುತ್ತೂರು: ಇಲ್ಲಿನ ಸಹಾಯಕ ಆಯುಕ್ತರಾಗಿದ್ದ ಗಿರೀಶ್ ನಂದನ್‌ರವರು ವರ್ಗಾವಣೆಗೊಂಡಿದ್ದಾರೆ. ತೆರವಾಗಲಿರುವ ಪುತ್ತೂರು ಸಹಾಯಕ ಆಯುಕ್ತ ಹುದ್ದೆಗೆ ಮಂಗಳೂರು ಕೆ.ಐ.ಎ.ಡಿ.ಬಿ. ವಿಶೇಷ ಭೂಸ್ವಾಧೀನಾಧಿಕಾರಿ ಮಹೇಶ್ ಚಂದ್ರ ನೇಮಕಗೊಂಡಿದ್ದಾರೆ.
ಗಿರೀಶ್ ನಂದನ್ ಅವರು ಎತ್ತಿನಹೊಳೆ ಯೋಜನೆಯ ವಿಶೇಷ ಭೂಸ್ವಾಧಿನಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.