ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆಯವರೆಗೆ 30.96 ಪ್ರತಿಶತ ಮತದಾರರು ಮತ ಚಲಾಯಿಸಿದ್ದಾರೆ.
ಬೆಳ್ತಂಗಡಿ ಕ್ಷೇತ್ರದಲ್ಲಿ 32.39 ಪ್ರತಿಶತ ಮತದಾರರು, ಮೂಡುಬಿದಿರೆ ಕ್ಷೇತ್ರದಲ್ಲಿ 27.46 ಪ್ರತಿಶತ ಮತದಾರರು, ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ 30.39 ಪ್ರತಿಶತ ಮತದಾರರು, ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 26.54 ಪ್ರತಿಶತ ಮತದಾರರು, ಮಂಗಳೂರು ಕ್ಷೇತ್ರದಲ್ಲಿ 31.63 ಪ್ರತಿಶತ ಮತದಾರರು, ಬಂಟ್ವಾಳ ಕ್ಷೇತ್ರದಲ್ಲಿ 32.28 ಪ್ರತಿಶತ ಮತದಾರರು, ಪುತ್ತೂರು ಕ್ಷೇತ್ರದಲ್ಲಿ 32.98 ಪ್ರತಿಶತ ಮತದಾರರು ಹಾಗೂ ಸುಳ್ಯ ಕ್ಷೇತ್ರದಲ್ಲಿ 34.7 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ.