ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಸ್ಲೀಪ್ ಮೋಡ್ಗೆ ಹೋಗಿದೆ ಎಂದು ಇಸ್ರೋ ತಿಳಿಸಿದೆ. ಇದಕ್ಕೂ ಮೊದಲು ಪೇಲೋಡ್ಗಳಾದ ChaSTE, RAMBHA, ILSA ಹೊಸ ಸ್ಥಳದಲ್ಲಿ ಕಾರ್ಯ ನಿರ್ವಹಿಸಿದ್ದವು. ಇವುಗಳ ಮಾಹಿತಿ ಕೇಂದ್ರಕ್ಕೆ ತಲುಪಿದೆ.
ಪ್ರಸ್ತುತ ಪೇಲೋಡ್ಗಳು ಸ್ವಿಚ್ ಆಫ್ ಆಗಿವೆ. ಲ್ಯಾಂಡರ್ ರಿಸೀವರ್ಗಳು ಇನ್ನೂ ಆನ್ ಆಗಿವೆ. ಸೋಲಾರ್ ಶಕ್ತಿ ಈಗಾಗಲೇ ಖಾಲಿಯಾಗಿದ್ದು, ವಿಕ್ರಮ್ ಕೂಡ ಪ್ರಗ್ಯಾನ್ ಜತೆಯಲ್ಲೇ ನಿಲ್ಲಲಿದೆ. ಸೆ.22ರ ನಂತರ ಮತ್ತೆ ಕಾರ್ಯನಿರ್ವಹಿಸುವ ವಿಶ್ವಾಸವಿದೆ ಎಂದಿದೆ.