ನಮ್ಮ ಮೊಬೈಲ್ ನಲ್ಲಿ ನೆಟ್ ವರ್ಕ್ ಸರಿಯಾಗಿ ಸಿಕ್ತಾ ಇಲ್ಲ ಅಂದ್ರೆ ನೆಟ್ ವರ್ಕ್ ಸಿಗುವ ಜಾಗದ ಬಳಿ ನಮ್ಮ ಮೊಬೈಲ್ ಫೋನ್ ತೆಗೆದುಕೊಂಡು ಹೋಗುತ್ತೇವೆ. ಆಗಲೂ ಸರಿಯಾಗಿ ನೆಟ್ ವರ್ಕ್ ಸಿಕ್ತಾ ಇಲ್ಲ ಅಂದರೆ ಸ್ವಿಚ್ಡ್ ಆಫ್ ಮಾಡಿ ಒಂದು ಸಲಿ ಸಿಮ್ ತೆಗೆದು ಹಾಕುತ್ತೇವೆ.
ಆದರೆ ಇಲ್ಲೊಬ್ಬ ವ್ಯಕ್ತಿ ಮೊಬೈಲ್ ನಲ್ಲಿ ನೆಟ್ ವರ್ಕ್ ಸರಿಯಾಗಿ ಸಿಕ್ತಾ ಇಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾನೆ. ಕೇಳಲು ವಿಚಿತ್ರವಾದರೂ ಇಂಥದ್ದೊಂದು ಘಟನೆ ಕೇರಳದಲ್ಲಿ ನಡೆದಿದೆ.
ಕಳೆದ ಕೆಲ ದಿನಗಳಿಂದ ಮೊಬೈಲ್ ನಲ್ಲಿ ಸರಿಯಾಗಿ ನೆಟ್ ವರ್ಕ್ ಸಿಕ್ತಾ ಇಲ್ಲ. ಈ ಕಾರಣದಿಂದ ಫೋನ್ ಬಳಸಲು ಆಗುತ್ತಿಲ್ಲ. ಕರೆ ಮಾಡಲೂ ಕೂಡ ಆಗುತ್ತಿಲ್ಲ. ಇವತ್ತಲ್ಲ, ನಾಳೆ ಸರಿ ಆಗುತ್ತದೆಂದು ಕಾದು ಕೂತಿದ್ದ ಮೈಲಪುಳ ಮೂಲದ ಜೆರಿನ್ (29) ಎನ್ನುವ ಯುವಕ ನೆಟ್ ವರ್ಕ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾನೆ.
ಈ ಕಾರಣದಿಂದ 100 ಅಡಿ ಎತ್ತರದ ಮೊಬೈಲ್ ಟವರ್ ಗೆ ಹತ್ತಿ, ನೆಟ್ ವರ್ಕ್ ಸಮಸ್ಯೆಯನ್ನು ಹೇಳುತ್ತಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಇದರಿಂದ ಸ್ಥಳೀಯರು ಭೀತಿಯಿಂದ ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಯುವಕನ ಊರಿನಲ್ಲಿ ನೆಟ್ ವರ್ಕ್ ಸಮಸ್ಯೆ ವಿಪರೀತವಗಿದೆ. ಹೆಚ್ಚಿನ ಗ್ರಾಹಕರ ಫೋನ್‌ಗಳಲ್ಲಿ ಯಾವುದೇ ನೆಟ್‌ವರ್ಕ್ ಇಲ್ಲದೆ ಇರುವುದರಿಂದ ಜನ ಇತರರೊಂದಿಗೆ ಫೋನ್ ನಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ.