ಮಂಗಳೂರು: ಕೆಲಸ ಮಾಡುತ್ತಿರುವಾಗ ಎದೆನೋವು ಕಾಣಿಸಿಕೊಂಡು ತಕ್ಷಣ ರೆಸ್ಟ್ ರೂಮಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಂತೆ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಉರ್ವ ಮಾರಿಗುಡಿ ನಿವಾಸಿ, ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ರಾಜೇಶ್ ಬಿ.ಯು ಎಂದು ಗುರುತಿಸಲಾಗಿದ್ದು, ಇವರು ಗುಪ್ತಚಾರ ಇಲಾಖಾ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂರ್ದಭದಲ್ಲಿ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ರೆಸ್ಟ್ ರೂಮಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.