ಕಾಸರಗೋಡು: ರಸ್ತೆಗಳಲ್ಲಿ ಇರುವ ಗುಂಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಇಂಪಾಶೇಖರ್ ಅವರು ಆದೇಶವನ್ನು ನೀಡಿದ್ದು, ಅದರಂತೆ ಚೆರ್ಕಳ ರಸ್ತೆಯಲ್ಲಿ ಇರುವ ಅಪಾಯಕಾರಿ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯಿತು.
ಮೇಲ್ಪರಂಬ ಜಂಕ್ಷನ್ ಸಮೀಪದಲ್ಲಿ ಉಂಟಾಗಿದ್ದ ಹೊಂಡಗಳನ್ನು ಮುಚ್ಚಿ ಮರು ಡಾಮರೀಕರಣ ಗೊಳಿಸಲಾಯಿತು. ಕೇರಳ ರಸ್ತೆ ನಿಧಿ ಮಂಡಳಿ ಇಂಜಿನಿಯರ್ ನೇತೃತ್ವದಲ್ಲಿ ರಸ್ತೆಯನ್ನು ದುರಸ್ತಿಗೊಳಿಸಲಾಯಿತು.
ಲ್ನಾಡ್-ಜುಮಾ ಮಸೀದಿ ಬಳಿಯ ರಸ್ತೆಯಲ್ಲಿ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಲಾಗಿದ್ದು, ಚಂದ್ರ ಗಿರಿ ರಸ್ತೆಯಲ್ಲಿ ಎರಡು ದಿನಗಳ ಹಿಂದೆ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಸ್ಥಳದಲ್ಲಿನ ಹೊಂಡವನ್ನು ಕೂಡ ಮುಚ್ಚಿದ್ದು, ಉಳಿದ ಹೊಂಡಗಳನ್ನು ಮುಚ್ಚುವ ಪ್ರಕ್ರಿಯೆ ನಡೆಯುತ್ತಿದೆ. ಚೆರ್ಕಳ-ಜಾಲ್ಸೂರು ರಸ್ತೆಯಲ್ಲಿನ ಚೆರ್ಕಳದಿಂದ ಕೆ.ಕೆ.ಪುರ ತನಕದ ರಸ್ತೆಯಲ್ಲಿನ ಹೊಂಡಗಳನ್ನು ಮುಚ್ಚಲು ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಭೆಯಲ್ಲಿ ವಿವಿಧ ರಸ್ತೆ ವಿಭಾಗ ಇಂಜಿನೀಯರ್ ಪ್ರದೀಪ್ ಕುಮಾರ್, ವಿ. ಮಿತ್ರಾ, ಸುಜಿತ್, ಕೆ.ರಾಜೀವನ್, ಪ್ರಕಾಶ್ ಪಿ., ಸಿ.ಧನ್ಯ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.