ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಗಾಂಧಿ ಜಯಂತಿಯ ಹಿಂದಿನ ದಿನ ಅ.1 ಆದಿತ್ಯವಾರದಂದು ಸ್ವಚ್ಛತಾ ಕಾರ್ಯಕ್ರಮ ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲ (ರಿ)ವತಿಯಿಂದ ಕೆಮ್ಮಾಯಿ ಅಶ್ವತ ಕಟ್ಟೆಯಿಂದ ಸ್ವಚ್ಛತಾ ಕಾರ್ಯಕ್ರಮ ಆರಂಭಗೊಂಡು ಮೂಡಾಯೂರು ರಸ್ತೆಯನ್ನು ಸ್ವಚ್ಛವಾಗಿ ಇಡಬೇಕೆಂಬ ಸಂಕಲ್ಪದೊಂದಿಗೆ ಸ್ವಚ್ಛದ ಕಾರ್ಯಕ್ರಮವನ್ನು ಹಮ್ಮಿಕೊಂಡಲಾಯಿತು.
ಸ್ವಚ್ಛತಾ ಕಾರ್ಯಕ್ರಮವು ಕೆಮ್ಮಾಯಿ ಅಶ್ವತ ಕಟ್ಟೆಯಿಂದ ಆರಂಭಗೊಂಡು ಕೆಮ್ಮಾಯಿ ಮೂಡಾಯೂರು ರಸ್ತೆಯ ಇಕ್ಕೆಲಗಳಲ್ಲಿ ಇರುವ ಪ್ಲಾಸ್ಟಿಕ್, ಪೇಪರ್ ಇತ್ಯಾದಿ ಕಸಗಳನ್ನು ಹೆಕ್ಕುವ ಮೂಲಕ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಯುವಕ ಮಂಡಲದ ಗೌರವ ಅಧ್ಯಕ್ಷ ಚಿದಾನಂದ ರೈ, ಯುವಕ ಮಂಡಲದ ಅಧ್ಯಕ್ಷ ನಾಗೇಶ್ ಭಾರತ, ಕಾರ್ಯದರ್ಶಿ ದಯಾನಂದ ಗೌಡ, ಸಂಚಾಲಕ ಹೇಮಚಂದ್ರ
ಹಾಗೂ ಸಲಹಾ ಸಮಿತಿ ಸದಸ್ಯರಾದ ಪ್ರಶಾಂತ್ ಭೋವುದಕಾಡು, ಮಂಜುನಾಥ್, ಪ್ರವೀಣ್ ನ್ಯಾಕ್ ಕೇಬಲ್, ಪ್ರಕಾಶ್ ಹೊಸಹೊಕ್ಲು, ಯೋಗೀಶ್, ಚೇತನ್ ಭರತಪುರ, ಪ್ರಶಾಂತ್.ಇ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.