ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮ ಪಂಚಾಯತ್ ವತಿಯಿಂದ 154ನೇ ವರ್ಷದ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಮಾರ್ನಬೈಲು ಪ್ರದೇಶದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಅನಿತಾ, ಸದಸ್ಯರುಗಳಾದ ಪ್ರವೀಣ್ ಗಟ್ಟಿ ಸರೋಜಿನಿ ಹಾಲಾಡಿ ನವೀನ್ ಅಂಚನ್ ರಾಜೇಶ್ ಸಂದೀಪ್, ಚಂದ್ರಕಲಾ ಪ್ರವೀಣ್ ರಾವ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್ ಕೆ ಎಚ್, ಪಂಚಾಯತಿ ಸಿಬ್ಬಂದಿಗಳಾದ ಆರಿಸ್, ಸುಮನ, ನಳಿನಿ, ಜಯಶ್ರೀ ಮೊದಲಾದವರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.