ಪುತ್ತೂರು: ಅಕ್ಷಯ ಕಾಲೇಜಿನಲ್ಲಿ FACERA ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಉದ್ಗಾಟನಾ ಸಮಾರಂಭವು ಅಕ್ಷಯ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಫ್ಯಾಷನ್ ಡಿಸೈನ್ ವಿಭಾಗ ಮತ್ತು ಐಕ್ಯುಎಸಿ ಇದರ ಸಹಯೋಗದೊಂದಿಗೆ ನಡೆಯಿತು.
ಪಾತ್ ವೇ ಎಂಟರ್ ಪ್ರೈಸಸ್ ಮಾಲಕರಾದ ಶ್ರೀ ದೀಪಕ್ ಗಂಗೂಲಿ ಅವರು FACERA ಫ್ಯಾಷನ್ ಡಿಸೈನ್ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ಕಾಲಘಟ್ಟದಲ್ಲಿ ಫ್ಯಾಷನ್ ಎಂಬುದು ಅತೀ ಮುಖ್ಯವಾದದ್ದು ಅದೇ ರೀತಿ ಈ ಕ್ಷೇತ್ರದಲ್ಲಿ ಒಳ್ಳೆ ಭವಿಷ್ಯ ಇದೆ ಎಂದು ಹೇಳುತ್ತಾ FACERA ಸಂಘಕ್ಕೆ ಶುಭ ಹಾರೈಸಿದರು.
Vanzova Facito ಸೀಸನ್ – 1 ಫ್ಯಾಷನ್ ಶೋ ವನ್ನು ಉದ್ಘಾಟಿಸಿದ ಕನ್ನಡ ಚಿತ್ರನಟ ಶ್ರೀ ಆರ್ಯನ್ ಅವರು ಮಾತನಾಡಿ ಚಿತ್ರರಂಗದಲ್ಲಿ ಫ್ಯಾಷನ್ ಎಂಬುದು ಬಹುಪಾಲು ವಹಿಸಿದೆ, ಹಾಗೆಯೇ ಈ ಕಾಲೇಜಿನಿಂದ ಫ್ಯಾಷನ್ ರಂಗಕ್ಕೆ ಇನಷ್ಟು ಪ್ರತಿಭೆಗಳು ಮೂಡಿ ಬರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಜಯಂತ್ ನಡುಬೈಲು ಇವರು Aqiula ಬ್ಲಾಗ್ ಪೇಜ್ ಅನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಿಸ್ಟರ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾದ ವಚನ್.ಎಸ್ ರವರಿಗೆ ಗೌರವಿಸಲಾಯಿತು.
ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ಪ್ರಾಂಶುಪಾಲರು ಸಂಪತ್ ಕೆ ಪಕ್ಕಳ, ಫ್ಯಾಷನ್ ಡಿಸೈನ್ ವಿಭಾಗದ ಮುಖ್ಯಸ್ಥರಾದ ಕಿಶನ್ ಎನ್ ರಾವ್, ಅಸೋಸಿಯೇಷನ್ ಸಂಯೋಜಕರಾದ ದೀಪ್ತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಅಸೋಸಿಯೇಷನ್ ಅಧ್ಯಕ್ಷೆ ವಿದ್ಯಾಶ್ರೀ ಸ್ವಾಗತಿಸಿ, ಫ್ಯಾಷನ್ ಡಿಸೈನ್ ವಿಭಾಗದ ಮುಖ್ಯಸ್ಥರಾದ ಕಿಶನ್ ಎನ್ ರಾವ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಶ್ರದ್ದಾ ವಂದಿಸಿ, ಧಕ್ಷಿತಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.