![ಅಕ್ಷಯ ಕಾಲೇಜಿನಲ್ಲಿ FACERA ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಉದ್ಗಾಟನಾ ಸಮಾರಂಭ.](https://i0.wp.com/veekshakavani.com/wp-content/uploads/2023/10/FACERA-ಫ್ಯಾಷನ್-ಡಿಸೈನ್-ಸಂಘದ-ಉದ್ಘಾಟನೆ.jpg?resize=640%2C400&ssl=1)
ಪುತ್ತೂರು: ಅಕ್ಷಯ ಕಾಲೇಜಿನಲ್ಲಿ FACERA ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಉದ್ಗಾಟನಾ ಸಮಾರಂಭವು ಅಕ್ಷಯ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಫ್ಯಾಷನ್ ಡಿಸೈನ್ ವಿಭಾಗ ಮತ್ತು ಐಕ್ಯುಎಸಿ ಇದರ ಸಹಯೋಗದೊಂದಿಗೆ ನಡೆಯಿತು.
![ಉದ್ಗಾಟನಾ ಸಮಾರಂಭವು ಅಕ್ಷಯ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಫ್ಯಾಷನ್ ಡಿಸೈನ್ ವಿಭಾಗ ಮತ್ತು ಐಕ್ಯುಎಸಿ ಇದರ ಸಹಯೋಗದೊಂದಿಗೆ ನಡೆಯಿತು.](https://i0.wp.com/veekshakavani.com/wp-content/uploads/2023/10/FACERA-ಫ್ಯಾಷನ್-.jpg?resize=640%2C400&ssl=1)
ಪಾತ್ ವೇ ಎಂಟರ್ ಪ್ರೈಸಸ್ ಮಾಲಕರಾದ ಶ್ರೀ ದೀಪಕ್ ಗಂಗೂಲಿ ಅವರು FACERA ಫ್ಯಾಷನ್ ಡಿಸೈನ್ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ಕಾಲಘಟ್ಟದಲ್ಲಿ ಫ್ಯಾಷನ್ ಎಂಬುದು ಅತೀ ಮುಖ್ಯವಾದದ್ದು ಅದೇ ರೀತಿ ಈ ಕ್ಷೇತ್ರದಲ್ಲಿ ಒಳ್ಳೆ ಭವಿಷ್ಯ ಇದೆ ಎಂದು ಹೇಳುತ್ತಾ FACERA ಸಂಘಕ್ಕೆ ಶುಭ ಹಾರೈಸಿದರು.
![](https://i0.wp.com/veekshakavani.com/wp-content/uploads/2023/10/IMG-20231004-WA0030.jpg?resize=768%2C1024&ssl=1)
![](https://i0.wp.com/veekshakavani.com/wp-content/uploads/2023/10/IMG-20231004-WA0029.jpg?resize=1024%2C768&ssl=1)
Vanzova Facito ಸೀಸನ್ – 1 ಫ್ಯಾಷನ್ ಶೋ ವನ್ನು ಉದ್ಘಾಟಿಸಿದ ಕನ್ನಡ ಚಿತ್ರನಟ ಶ್ರೀ ಆರ್ಯನ್ ಅವರು ಮಾತನಾಡಿ ಚಿತ್ರರಂಗದಲ್ಲಿ ಫ್ಯಾಷನ್ ಎಂಬುದು ಬಹುಪಾಲು ವಹಿಸಿದೆ, ಹಾಗೆಯೇ ಈ ಕಾಲೇಜಿನಿಂದ ಫ್ಯಾಷನ್ ರಂಗಕ್ಕೆ ಇನಷ್ಟು ಪ್ರತಿಭೆಗಳು ಮೂಡಿ ಬರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಜಯಂತ್ ನಡುಬೈಲು ಇವರು Aqiula ಬ್ಲಾಗ್ ಪೇಜ್ ಅನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಿಸ್ಟರ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾದ ವಚನ್.ಎಸ್ ರವರಿಗೆ ಗೌರವಿಸಲಾಯಿತು.
![](https://i0.wp.com/veekshakavani.com/wp-content/uploads/2023/10/IMG-20231004-WA0027.jpg?resize=300%2C225&ssl=1)
ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ಪ್ರಾಂಶುಪಾಲರು ಸಂಪತ್ ಕೆ ಪಕ್ಕಳ, ಫ್ಯಾಷನ್ ಡಿಸೈನ್ ವಿಭಾಗದ ಮುಖ್ಯಸ್ಥರಾದ ಕಿಶನ್ ಎನ್ ರಾವ್, ಅಸೋಸಿಯೇಷನ್ ಸಂಯೋಜಕರಾದ ದೀಪ್ತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
![](https://i0.wp.com/veekshakavani.com/wp-content/uploads/2023/10/IMG-20231004-WA0031.jpg?resize=300%2C225&ssl=1)
ಅಸೋಸಿಯೇಷನ್ ಅಧ್ಯಕ್ಷೆ ವಿದ್ಯಾಶ್ರೀ ಸ್ವಾಗತಿಸಿ, ಫ್ಯಾಷನ್ ಡಿಸೈನ್ ವಿಭಾಗದ ಮುಖ್ಯಸ್ಥರಾದ ಕಿಶನ್ ಎನ್ ರಾವ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಶ್ರದ್ದಾ ವಂದಿಸಿ, ಧಕ್ಷಿತಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.