ಗ್ರಾನೈಟ್ ಲಾರಿ ಪಲ್ಟಿಯಾಗಿ ನಾಲ್ವರು ಗಂಭೀರ ಗಾಯಗೊಂಡ ಪ್ರಕರಣ; ಚಿಕಿತ್ಸೆಯಲ್ಲಿದ್ದ ಓರ್ವ ಸಾವು

Share with

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಗ್ರಾನೈಟ್ ಲಾರಿ ಪಲ್ಟಿಯಾಗಿ ಗಂಭೀರ ಗಾಯಗೊಂಡ ಘಟನೆ ಇಂದು(ಅ.4) ನಡೆದಿದ್ದು, ಗಂಭೀರ ಗಾಯಗೊಂಡಿದ್ದ ನಾಲ್ವರಲ್ಲಿ ಓರ್ವ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮಾರ್ಬಲ್‌ ತುಂಬಿಕೊಂಡು ಬಂದ ಲಾರಿಯೊಂದು ಪಲ್ಟಿಯಾಗಿ ನಾಲ್ಕು ಜನ ಗಂಭೀರ ಗಾಯಗೊಂಡ ಘಟನೆ ಅ.4ರಂದು ನಡೆದಿದೆ.

ಸಾವನ್ನಪ್ಪಿದ್ದ ವ್ಯಕ್ತಿಯನ್ನು ಉತ್ತರ ಭಾರತ ಮೂಲದ ಸುಭಾಶ್ವಂದ್ರ ಎಂದು ಗುರುತಿಸಲಾಗಿದೆ. ಹರ್ಷದ್‌ ಮತ್ತು ಪವನ್‌ ಹಾಗೂ ಇನ್ನೋರ್ವರ ಸ್ಥಿತಿ ಚಿಂತಾಜನಕವಾಗಿದ್ದು, ಅವರಿಗೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಗಾಯಗೊಂಡವರಲ್ಲಿ ಇಬ್ಬರು ಉತ್ತರ ಭಾರತದ ಮೂಲದವರು ಮತ್ತು ಇಬ್ಬರು ಮಂಗಳೂರಿನವರು ಎಂದು ಗುರುತಿಸಲಾಗಿದೆ.


Share with

Leave a Reply

Your email address will not be published. Required fields are marked *