ಮಂಗಳೂರು: ಎಪಿಎಂಸಿಯಲ್ಲಿ ಅಡಕೆ ಧಾರಣೆಯು ನಿರಂತರವಾಗಿ ಏರುಮುಖವಾಗಿರುವುದು ಮಲೆನಾಡು, ಅರೆಮಲೆನಾಡು ಮತ್ತು ಬಯಲು ಪ್ರದೇಶದ ರೈತರಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಜುಲೈ ತಿಂಗಳಲ್ಲಿ ಮೊದಲ ಬಾರಿಗೆ ಸರಕು ಅಡಿಕೆಯ ಬೆಲೆ ರೂ. 82496 ರ ಗಡಿ ದಾಟಿದೆ. ಈ ಹಂಗಾಮಿನಲ್ಲಿ ಜೂ.19ರಂದು ಮೊದಲ ಬಾರಿಗೆ ಸರಕು ಅಡಿಕೆಗೆ ಕ್ವಿಂಟಲ್ಗೆ ರೂ.82,400 ದರ ದೊರಕಿತ್ತು.
ಇನ್ನು ಜೂ. 21ರಂದು ಗರಿಷ್ಠ ರೂ.86,400 ಕ್ಕೆ ಮಾರಾಟವಾಗುವ ಮೂಲಕ ಈ ಬಾರಿಯ ದಾಖಲೆ ಬರೆದಿದೆ. ಜೂ.22ರಂದು 86,100, 27ರಂದು 83,200 ಬೆಲೆ ಪಡೆದಿದ್ದ ಸರಕು ಅಡಿಕೆ, ಕಳೆದೊಂದು ವಾರದಿಂದ 76,600ರ ಆಸುಪಾಸು ಇತ್ತು. ಈಗ ಮತ್ತೆ ದಿಡೀರನೆ ಅಡಿಕೆ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಂಡುಬರುತ್ತಿದೆ.
ಇಂದಿನ ಅಡಿಕೆ ಬೆಲೆ:
- ರಾಶಿ ಅಡಿಕೆ – ಪ್ರತೀ ಕ್ವಿಂಟಲ್ಗೆ 56,299ರೂ, ಕನಿಷ್ಠ 39,201,
- ಬೆಟ್ಟೆ ಅಡಿಕೆ – ಪ್ರತೀ ಕ್ವಿಂಟಲ್ಗೆ ಗರಿಷ್ಠ 55, 382ರೂ ಕನಿಷ್ಠ 45,000ರೂ
- ಗೊರಬಲು – ಪ್ರತೀ ಕ್ವಿಂಟಾಲ್ ಗೆ ಗರಿಷ್ಠ 42,399ರೂ ಕನಿಷ್ಠ 18,000ರೂ
- ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಗರಿಷ್ಠ 55599,
ಕೆಂಪು ಗೋಟಿಗೆ 42899 ಬೆಲೆ ನೆಡೆಯುತ್ತಿದೆ.