ಬೆಂಗಳೂರು: ಇನ್ನು ಮುಂದೆ ಶಾಲೆಗಳಲ್ಲಿ ಮಕ್ಕಳಿಗೆ ವಾರಕ್ಕೆ ಎರಡು ಮೊಟ್ಟೆ ನೀಡುವುದಾಗಿ ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯರವರಲ್ಲಿ ಮನವಿ ಮಾಡಿಕೊಂಡಿದ್ದು ಅವರು ಅನುಮತಿ ಸೂಚಿಸಿದ್ದಾರೆ. ವಾರ್ಷಿಕವಾಗಿ 84 ದಿನ ಮಕ್ಕಳಿಗೆ ಕೊಡಲಾಗುತ್ತದೆ. ಮೊಟ್ಟೆ ತಿನ್ನದೇ ಇರುವವರು ಚಿಕ್ಕಿ ಬಾಳೆ ಹಣ್ಣು ಕೊಡುವ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ಅಧಿಕಾರವನ್ನು ಎಸ್‌ಡಿಎಂಸಿ ಅವರಿಗೆ ಕೊಟ್ಟಿದ್ದು, ಕ್ವಾಲಿಟಿ ಚೆನ್ನಾಗಿಲ್ಲ ಎಂದಲ್ಲಿ ಎಸ್‌ಡಿಎಮ್‌ಸಿ ಅವರೇ ಜವಾಬ್ದಾರರಾಗಿರುತ್ತಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹೇಳಿದ್ದಾರೆ.