ಉಪ್ಪಳ: ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಸೋಂಕಾಲಿನಲ್ಲಿ ನಡೆದಿದೆ. ಮೀಂಜ ಪಂಚಾಯತ್ ವ್ಯಾಪ್ತಿಯ ಕೊಜಮುಕು ಉಮಿಕ್ಕಳ ನಿವಾಸಿ[ದಿ] ಮೊಯಿದೀನ್ ಕುಂಞ ರವರ ಪುತ್ರ ಮೊಹಮ್ಮದ್ [35] ಮೃತಪಟ್ಟಿದ್ದಾರೆ.

ಜ.7ರಂದು ಮಧ್ಯಾಹ್ನ ಸ್ಕೂಟರ್‌ನಲ್ಲಿ ಕೊಡಂಗೆಯಿಂದ ಸೋಂಕಾಲು ರಸ್ತೆ ಪ್ರವೇಶಿಸುತ್ತಿದ್ದಂತೆ ಬೇಕೂರು ಭಾಗದಿಂದ ಅಮಿತ ವೇಗದಲ್ಲಿ ಆಗಮಿಸಿದ ಕಾರು ಸ್ಜೂಟರ್‌ಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಇವರನ್ನು ಸ್ಥಳೀಯರು ಕೂಡಲೇ ಉಪ್ಪಳದ ಖಸಾಗಿ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರಲ್ಲಿ ಮೃತಪಟ್ಟಿದ್ದಾರೆ.
![ಮೀಂಜ ಪಂಚಾಯತ್ ವ್ಯಾಪ್ತಿಯ ಕೊಜಮುಕು ಉಮಿಕ್ಕಳ ನಿವಾಸಿ[ದಿ] ಮೊಯಿದೀನ್ ಕುಂಞ ರವರ ಪುತ್ರ ಮೊಹಮ್ಮದ್](https://i0.wp.com/veekshakavani.com/wp-content/uploads/2024/01/%E0%B2%AE%E0%B3%8A%E0%B2%B9%E0%B2%AE%E0%B3%8D%E0%B2%AE%E0%B2%A6%E0%B3%8D.jpg?resize=640%2C400&ssl=1)
ಇವರು ಗೋವದಲ್ಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಊರಿಗೆ ತಲುಪಿದ್ದರು. ಮಂಜೇಶ್ವರ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತರು ತಾಯಿ ನಫೀಸ, ಪತ್ನಿ ಮಿಶ್ರಿಯಾ, ಮಕ್ಕಳಾದ ಅಜ್ಜು, ಫಾತಿಮ್ಮ, ಮೊಹಮ್ಮದ್, ಮೂರು ಮಂದಿ ಸಹೋದರರು, ನಾಲ್ಕು ಮಂದಿ ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.