ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟ: ಆರೋಪಿಗಳ ಮೇಲೆ ಎಫ್.ಐ.ಆ‌ರ್ ದಾಖಲು

Share with

ಉಡುಪಿ :   ಕಾಪು ಪೇಟೆಯಲ್ಲಿ ಆಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನ ಭಾಗ್ಯ ಯೋಜನೆಯ 250 ಕೆ.ಜಿ. ಅಕ್ಕಿಯನ್ನು ಸೀಜ್ ಮಾಡಿದ್ದು, ತಹಶೀಲ್ದಾ‌ರ್ ಡಾ.ಪ್ರತಿಭಾ ಆ‌ರ್ ಆರೋಪಿಗಳ ಮೇಲೆ ಎಫ್.ಐ.ಆ‌ರ್ ದಾಖಲಿಸಿದ್ದಾರೆ.

ಪ್ಯಾಸೆಂಜ‌ರ್ ಆಟೋದಲ್ಲಿ ಸಾಗಿಸುತ್ತಿದ್ದ 6 ಚೀಲಗಳಲ್ಲಿ ಇದ್ದ 250 ಕೆ.ಜಿ. ಅಕ್ಕಿಯನ್ನು ಮುಟ್ಟುಗೋಲು ಹಾಕಿ, ಕಾಪು ಪೋಲೀಸ್ ಸ್ಟೇಷನ್ ಗೆ ದೂರು ನೀಡಿ ಎಪ್ ಐ ಆರ್ ದಾಖಲಿಸಿದ್ದಾರೆ.

ಆರೋಪಿಗಳಾದ ಕಲಂದರ್ ಶಾಫಿ, ಉಬೈದುಲ್ಲ ರವರನ್ನು ವಿಚಾರಣೆಗೆ ಒಳಪಡಿಸಿದಾಗ “ಪಡಿತರದಾರರಿಂದ” 20 ರೂಪಾಯಿಯಂತೆ ಖರೀದಿಸಿದ್ದು ಹೆಚ್ಚಿನ ಬೆಲೆಗೆ ಮಾರಲು ತಗೊಂಡು ಗೋಗಿದ್ದೆವು ಎಂದು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *