ಮಂಗಳೂರು: ಮಲ್ಲಮಾರ್ ಬೀಚ್‌ಗೆ ಬಂದಿದ್ದ ಮೂವರು ವ್ಯಕ್ತಿಗಳಲ್ಲಿ ಓರ್ವ ನೀರುಪಾಲಾಗಿದ್ದು, ಇಬ್ಬರನ್ನು ಸ್ಥಳೀಯರು ರಕ್ಷಿಸಿದ ಘಟನೆ ನಡೆದಿದೆ.
ನೀರುಪಾಲಾಗಿದ್ದ ವ್ಯಕ್ತಿಯನ್ನು ಬಾಗಲಕೋಟೆ ಮೂಲದ ಮಾಂತೇಶ್ (೨೯) ಎಂದು ಗುರುತಿಸಲಾಗಿದ್ದು, ಮಾಂತೇಶ್ ತನ್ನ ಅಕ್ಕನ ಹತ್ತಿರ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಸ್ನೇಹಿತರೊಂದಿಗೆ ಬೀಚ್‌ಗೆ ಬಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.