ಕೇರಳ: ಶಬರಿಮಲೆ ಹುಂಡಿಯಲ್ಲಿ ಬೀಳುವ ಹಣವನ್ನು ಲೆಕ್ಕಹಾಕಲು AI(Artifical Inteligence) ಯಂತ್ರವನ್ನು ಬಳಸಲಾಗುವುದು ಎಂದು ಕೇರಳ ದೇವಸ್ವಂ ಮಂಡಳಿ ತಿಳಿಸಿದೆ. ಈ ಯಂತ್ರ ಒಂದು ನಿಮಿಷದಲ್ಲಿ 300 ನಾಣ್ಯ ಎಣಿಕೆ ಮಾಡುವ ಜೊತೆಗೆ ಅದನ್ನು ವರ್ಗೀಕರಣ ಮಾಡಲಿದೆ.
ಸ್ಪೂಕ್ ಫಿಶ್ ಎಂಬ ಬ್ಯಾಂಡ್‌ನ ಯಂತ್ರವನ್ನು ಅಳವಡಿಸಲು ಪ್ಲಾನ್ ರೂಪಿಸಲಾಗುತ್ತಿದ್ದು, ಇದು ಸ್ವಯಂ ಚಾಲಿತ ಲೋಡಿಂಗ್ ಫೀಚರ್ ಕೂಡ ಹೊಂದಿದೆ. ಸದ್ಯ ಈ ಹುಂಡಿಯಲ್ಲಿ ಬೀಳುವ 720 ಕೋಟಿ ನಾಣ್ಯಗಳ ಎಣಿಕೆಗೆ 3 ತಿಂಗಳು 1000 ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ.