ಬಿಹಾರದ ಯುವಕ ಶಶಿಕಾಂತ್ ಪ್ರಜಾಪತಿ ವಿಶ್ವದ ಅತ್ಯಂತ ಚಿಕ್ಕ ಮರದ ಚಮಚ ಸೃಷ್ಟಿಸಿ ಅಚ್ಚರಿ ಮೂಡಿಸಿದ್ದಾರೆ. 0.06 ಇಂಚು ಅಳತೆಯ ಚಮಚವನ್ನು ಕೆತ್ತುವ ಮೂಲಕ ಅವರು ಈಗಿರುವ 0.07 ಇಂಚುಗಳ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿದರು.
‘ಮರದ ಚಮಚ ತಯಾರಿಸುವುದು ತುಂಬಾ ಸುಲಭ. ಆದರೆ ವಿಶ್ವದ ಅತ್ಯಂತ ಚಿಕ್ಕ ಮರದ ಸ್ಪೂನ್ ತಯಾರಿಸುವುದು ಕಷ್ಟದ ಕೆಲಸ. ಅದಕ್ಕಾಗಿ ಶ್ರಮಿಸಿದ್ದೇನೆ’ ಎಂದು ಹೇಳಿದ್ದಾರೆ. ಈ ಹಿಂದೆಯೂ ಪ್ರಜಾಪತಿ ಪೆನ್ಸಿಲ್ ಲೆಡ್‌ನಿಂದ ಚೈನ್ ಕೆತ್ತುವ ಮೂಲಕ ದಾಖಲೆ ನಿರ್ಮಿಸಿದ್ದರು.